ಕಾಸರಗೋಡು: ಕೇರಳ ಪೋಲೀಸರು ಸೋಮವಾರ ಜಿಲ್ಲೆಯ ಹೆಲಿಪ್ಯಾಡ್ ಮೂಲಕ ಆಕಾಶದಲ್ಲಿ ವೈಮಾನಿಕ ವೀಕ್ಷಣೆ ನಡೆಸಿದರು.
ತಿರುವನಂತಪುರದಿಂದ ಆಗಮಿಸಿದ ಹೆಲಿಕಾಪ್ಟರ್ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಮೈದಾನದಲ್ಲಿ ಬಂದಿಳಿದು, ಜಿಲ್ಲಾ ಪೋಲೀಸ್ ಅಧಿಕಾರಿ, ಸ್ಪೆಷಲ್ ಬ್ರಾಂಚ್ ಡಿವೈಎಸ್‍ಪಿ ಎಂಬವರನ್ನೊಳಗೊಂಡ ತಂಡ ಹೆಲಿಕಾಪ್ಟರ್‍ನಲ್ಲಿ ವಿವಿಧ ಕಡೆ ಆಗಸದಲ್ಲಿ ವೈಮಾನಿಕ ವೀಕ್ಷಣೆ ನಡೆಸಿತು. ಕರಾವಳಿ ಪ್ರದೇಶ, ಅರಣ್ಯ ಪ್ರದೇಶ, ಗಡಿ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಿ ಹೆಲಿಕಾಪ್ಟರ್ ಹಿಂದಿರುಗಿತು. ಅರಣ್ಯ ಪ್ರದೇಶದಲ್ಲಿ ಮಾವೋಯಿಸ್ಟ್ ಚಟುವಟಿಕೆಗಳಿದ್ದು ಆ ಬಗ್ಗೆ ತಿಳಿಯಲು ವೈಮಾನಿಕ ವೀಕ್ಷಣೆ ನಡೆಸಲಾಯಿತು. ಅಲ್ಲದೆ ಗಡಿ ಪ್ರದೇಶಗಳಲ್ಲಿನ ಸಮಾಜಘಾತಕ ಚಟುವಟಿಕೆಗಳ ಬಗ್ಗೆ ತಿಳಿಯಲು ವೈಮಾನಿಕ ವೀಕ್ಷಣೆ ಮಾಡಲಾಯಿತು.