HEALTH TIPS

ಪಡಿತರ ಅಂಗಡಿಗಳು ರಾಜ್ಯದ ಜನತೆಯ ಉದರ ಪೋಷಣೆಯ ಕೇಂದ್ರಗಳಾಗಿವೆ; ಸಚಿವ ಪಿ.ತಿಲೋತ್ತಮನ್

 

        ಕಾಸರಗೋಡು: ರಾಜ್ಯದ ಒಟ್ಟು 14239 ಪಡಿತರ ಅಂಗಡಿಗಳು ಇಂದು ಎಲ್ಲ ಜನತೆಯ ಉದರ ಪೋಷಣೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ನಾಗರೀಕ ಪೂರೈಕೆ ಸಚಿವ ಪಿ.ತಿಲೋತ್ತಮನ್ ಅಭಿಪ್ರಾಯಪಟ್ಟರು. 

      ಬುಧವಾರ ನಗರಸಭೆ ಸಭಾಂಗಣದಲ್ಲಿ ಜರುಗಿದ ರಾಜ್ಯ ಆಹಾರ ಆಯೋಗದ ಜನಜಾಗೃತಿ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನೆ ನಡೆಸಿ ಮಾತನಾಡಿದರು. 

            ಕೋವಿಡ್ 19 ಸೋಂಕಿನ ಅವಧಿಯಲ್ಲಿ ನಿಗದಿತ ಆಹಾರ ಧಾನ್ಯಗಳನ್ನು ದಕ್ಷತೆಯಿಮದ ಪೂರ್ಯಸುವ ಪ್ರಧಶಾನ ಕೇಂದ್ರಗಳಾಗಿ ಪಡಿತರ ಅಂಗಡಿಗಳು ಮಾರ್ಪಟ್ಟಿವೆ. ಹಿಂದೆ ಶೇ 50 ಮಂದಿ ಪಡಿತರ ಅಂಗಡಿಗಳನ್ನು ಆಶ್ರಯಿಸುತ್ತಿದ್ದರೆ, ಇಂದು ಸೇ 97 ಮಂದಿ ಪಡಿತರ ಅಂಗಡಿಗಳನ್ನೇ ನಂಬಿ ಬದುಕುತ್ತಿದ್ದಾರೆ. ನಾಗರೀಕ ಪೂರೈಕೆ ವಲಯವನ್ನು ಸುಧಾರಿತಗೊಳಿಸಿ, ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ವಿತರಿಸಲು ಇಲಾಖೆಗೆ ಸಾಧ್ಯವಾಗಿದೆ ಎಂದರು.


          2016 ನವೆಂಬರ್ ತಿಂಗಳಲ್ಲಿ ಬಹಳ ಕಷ್ಟಪಟ್ಟು ರಾಷ್ಟ್ರೀಯ ಆಹಾರ ಸುರಕ್ಷೆ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿತ್ತು. ಆಹಾರ ಸುರಕ್ಷೆಯ ಎಲ್ಲ ಆಯಾಮಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸರುವ ರಾಜ್ಯ ಕೇರಳವಾಗಿದೆ. ಮನೆ ಬಾಗಿಲಿಗೇ ಪಡಿತರ ಸಾಮಾಗ್ರಿ ವಿತರಣೆ, ಕಂಪ್ಯೂಟರೀಕರಣ, ಪಡಿತರ ಅಂಗಡಿಗಳ ನವೀಕರಣ ಇತ್ಯಾದಿ ವಿಚಾರಗಳಲ್ಲಿ ಶೇ 100 ಸಾಧನೆ ನಡಸಲಾಗಿದೆ ಎಂದವರು ತಿಳಿಸಿದರು. 

        ಕಂದಾಯ ಸಚಿವ ಇ.ಚಂದ್ರಶೇಖರನ್ , ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿ.ಕೆ.ಶಶಿಧರನ್, ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಶಿಕ್ಷಣ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ, ಆಯೋಗ ಸದಸ್ಯರಾದ ವಿ.ರಮೇಶನ್, ಎಂ.ವಿಜಯಲಕ್ಷ್ಮಿ, ಕೆ.ದಿಲೀಪ್ ಕುಮಾರ್, ಪಿ.ವಸಂತಂ ಮೊದಲಾದವರು ಉಪಸ್ಥಿತರಿದ್ದರು. ಆಹಾರ ಆಯೋಗ ಕಮೀಷನರ್ ಕೆ.ವಿ.ಮೋಹನ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ಸದಸ್ಯ ವಿ.ರಾಜೇಂದ್ರನ್ ತರಗತಿ ನಡೆಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಯ್ಕೆಗೊಂಡಿರುವ ಮಂದಿಗಾಗಿ ಈ ತರಗತಿ ನಡೆಸಲಾಗಿತ್ತು. 

         ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಸ್ವಾಗತಿಸಿದರು. ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿ.ಕೆ.ಶಶಿಧರನ್ ವಂದಿಸಿದರು. ನಂತರ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಜರಗಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries