ಕಲ್ಲಿಕೋಟೆ: ಕೇರಳದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆಕೆ ರಾಮಚಂದ್ರನ್ ವಿಧಿವಶರಾಗಿದ್ದು, ಅವರಿಗೆ 78 ವರ್ಷ ವಯಸ್ಸಾಗಿತ್ತು.
ಕೇರದಳಲ್ಲಿ ರಾಮಚಂದ್ರನ್ ಮಾಸ್ಚರ್ ಎಂದೇ ಖ್ಯಾತಿ ಗಳಿಸಿದ್ದ ಕೆಕೆ ರಾಮಚಂದ್ರನ್ ಅವರು, ಈ ಹಿಂದೆ ಎಕೆ ???ಂಟಿನಿ ಅವರ ಸರ್ಕಾರದಲ್ಲಿ 1995-96ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಬಳಿಕ 2004ರಲ್ಲಿ ಊಮನ್ ಚಾಂಡಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ರಾಮಚಂದ್ರನ್ ಅವರು ಸುಲ್ತಾನ್ ಬಾಥೆರಿ ಮತ್ತು ಕಾಲ್ಪೆಟ್ಟಾ ಕ್ಷೇತ್ರಗಳನ್ನು ತಲಾ ಮೂರು ಬಾರಿ ಪ್ರತಿನಿಧಿಸಿದ್ದರು. ಸಾರ್ವಜನಿಕ ಜೀವನದಿಂದ ದೂರವಾದ ಬಳಿಕ ರಾಮಚಂದ್ರನ್ ಅವರು ಕೋಳಿಕೋಡ್ ನ ಕಕ್ಕೋಡಿಯಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅವರು ಬದುಕುಳಿಯಲಿಲ್ಲ.
ರಾಮಚಂದ್ರನ್ ಅವರ ನಿಧನಕ್ಕೆ ಸಿಎಂ ಪಿಣರಾಯಿ ವಿಜಯನ್, ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಕಂಬನಿ ಮಿಡಿದಿದ್ದಾರೆ.