ಕಾಸರಗೋಡು: ಜಿಲ್ಲೆಯ ಪಳ್ಳಿಕೆರೆ ಟೋಲ್ ಗೇಟ್ ಸನಿಹ ಕಾರಿನಲ್ಲಿ ಸಾಗಿಸುತ್ತಿದ್ದ ನಾಲ್ಕು ಕಿಲೋ ಚಿನ್ನವನ್ನು ಕಸ್ಟಂಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನಿವಾಸಿ ತುಷಾರ್ ಹಾಗೂ ಜ್ಯೋತಿರಾಮ್ ಎಂಬವರನ್ನು ಬಂಧಿಸಲಾಗಿದೆ.
ಕೋಯಿಕ್ಕೋಡಿನಿಂದ ಬೆಳಗಾವಿಗೆ ಚಿನ್ನ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ. ಕಾರಿನ ಹಿಂಭಾಗದ ಸೀಟಿನಡಿ ಪ್ರತ್ಯೇಕವಾಗಿ ನಿರ್ಮಿಸಲಾದ ಗೌಪ್ಯಸಂದಿಯಲ್ಲಿರಿಸಿ ಚಿನ್ನ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡಿರುವ ಚಿನ್ನದ ಮಾರುಕಟ್ಟೆ ಬೆಲೆ 1.75ಕೋಟಿ ರೂ. ಆಗಿದೆ ಎಂದು ಕಸ್ಟಂಸ್ ಅಧಿಕಾರಿಗಳು ತಿಳಿಸಿದ್ದಾರೆ. 2020 ಫೆಬ್ರವರಿ ತಿಂಗಳಲ್ಲಿ ಕಾಸರಗೋಡಿನಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ 6.20ಕೋಟಿ ರೂ. ಮೌಲ್ಯದ 15.5ಕಿ.ಗ್ರಾಂ ಚಿನ್ನವನ್ನು ಕಸ್ಟಂಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.