ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುವ ದೂರು ಪರಿಹಾರ ಅದಾಲತ್ ಗಳ ಅಂಗವಾಗಿ ಕಾಸರಗೋಡು ತಾಲೂಕು ಅದಾಲತ್ ಫೆ.1ರಂದು ಜರುಗಲಿದೆ. ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಆರೋಗ್ಯ, ಸ್ಥಳೀಯಾಡಳಿತ ಇಲಾಖೆಗಳಿಗೆ ಸಂಬಂಧಿಸಿ ದೂರುಗಳನ್ನು ಅದಾಲತ್ ನಲ್ಲಿ ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಯಿಂದ ಚಿಕಿತ್ಸಾ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳನ್ನು, ಎಲ್.ಆರ್.ಎಂ. ಕೇಸುಗಳು, ಸ್ಟಾಟಿಯೂಟರಿ ರೂಪದಲ್ಲಿ ಲಭಿಸಬೇಕಿರುವ ಪರಿಹಾರ, ಭೂಹಕ್ಕು ಪತ್ರ ಸಂಬಂಧ ಅರ್ಜಿಗಳನ್ನು ಈ ಅದಾಲತ್ ನಲ್ಲಿ ಪರಿಶೀಲಿಸುವುದಿಲ್ಲ.