ತಿರುವನಂತಪುರ: ಕೋವಿಡ್ ರೋಗಿಗಳ ಸಂಪರ್ಕ ಪಟ್ಟಿಯನ್ನು ತಯಾರಿಸುವ ರಚಿಸುವ ಜವಾಬ್ದಾರಿಯನ್ನು ಪೋಲೀಸರು ನಿಲ್ಲಿಸಿದ್ದಾರೆ. ಜವಾಬ್ದಾರಿಯನ್ನು ಹಂತ ಹಂತವಾಗಿ ಆರೋಗ್ಯ ಇಲಾಖೆಗೆ ವರ್ಗಾಯಿಸಲು ಡಿಜಿಪಿ ಆದೇಶ ನೀಡಿದ್ದಾರೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪೋಲೀಸರ ಅಗತ್ಯ ಇನ್ನಿರದು ಎಂದು ಡಿಜಿಪಿ ವಿವರಿಸಿರುವರು.
ಕೋವಿಡ್ ರೋಗಿಗಳ ಸಂಖ್ಯೆ ತೀವ್ರಗತಿಯಲ್ಲಿರುವ ಸಂದರ್ಭ ಸಂಪರ್ಕಪಟ್ಟಿ ತಯಾರಿಸುವ ಹೊಣೆಯನ್ನು ಪೋಲೀಸರಿಗೆ ವಹಿಸಲಾಗಿತ್ತು. ಈ ಆದೇಶವು ಅನೇಕ ಭಾಗಗಳಿಂದ ಟೀಕೆಗೆ ಗುರಿಯಾಗಿದ್ದವು.