ಬಾನ್: ಕೋವಿಡ್ ಸೋಂಕು ಪುರುಷರ ವೀರ್ಯದ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಕೋವಿಡ್ ಬಾಧೆಗೊಳಗಾದವರಲ್ಲಿ ವೀರ್ಯದ ಫಲವತ್ತತೆಯ ಶಕ್ತಿ ಮತ್ತು ಗರ್ಭಧಾರಣೆಯ ಸಾಫಲ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ. ಜರ್ಮನಿಯ ಜಸ್ಟೀಸ್.ಲಿಬಿಗ್ ವಿಶ್ವವಿದ್ಯಾಲಯವು ಈ ಅಧ್ಯಯನ ವರದಿಯನ್ನು ಇಂದು ಪ್ರಕಟಿಸಿದೆ.
ವೀರ್ಯದ ಶಕ್ತಿನಾಶ ಮತ್ತು ವೀರ್ಯ ಆರೋಗ್ಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದು. ಕೋವಿಡ್ ಸೋಂಕಿನಿಂದ ವೃಷಣ ಬಾತುಕೊಳ್ಳುವಿಕೆಯಂತಹ ತೊಂದರೆಗಳು ಉಂಟಾಗಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಇದು ಪುರುಷರ ವೀರ್ಯ ಫಲವತ್ತತೆ ಅಥವಾ ಪ್ರತ್ಯುತ್ಪಾದಕತೆಗೆ ಪರಿಣಾಮ ಬೀರಬಹುದು. ವೈರಸ್ ವಿರುದ್ಧದ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅಧ್ಯಯನದ ಮೂಲಕ ಕಂಡುಕೊಳ್ಳುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಅಧ್ಯಯನವು 84 ಪುರುಷರಲ್ಲಿ 60 ದಿನಗಳ ಕಾಲ ನಡೆಸಲಾಯಿತು. ಕೊರೋನಾ ವೈರಸ್ ವೀರ್ಯದ ಮೇಲೆ ಪರಿಣಾಮ ಬೀರುವುದು ಫಲವತ್ತತೆ ಮತ್ತು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದ ನೇತೃತ್ವ ವಹಿಸಿದ್ದ ಬೆಹ್ಜತ್ ಹಾಜಿಜಾದೆ ಮಾಲೆಕಿ ಹೇಳಿದ್ದಾರೆ.