ತಿರುವನಂತಪುರ: ಕಲ್ಯಾಣ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಸಚಿವ ಥಾಮಸ್ ಐಸಾಕ್ ಸೂಚನೆ ನೀಡಿದ್ದಾರೆ. ಮುಂದಿನ ಹಣಕಾಸು ವರ್ಷದ ರಾಜ್ಯದ ಬಜೆಟ್ ಅನ್ನು ಹಸ್ತಾಂತರಿಸುವ ಹಿನ್ನೆಲೆಯಲ್ಲಿ ಇಂತಹದೊಂದು ಸೂಚನೆ ನೀಡಲಾಗಿದ್ದು ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಈ ರೀತಿಯ ತೀರ್ಮಾನವೆನ್ನಲಾಗುತ್ತಿದೆ. ಸಾರ್ವಜನಿಕ ಪ್ರಕಟಣೆಗಳು ಮತ್ತು ವೇತನ ಸುಧಾರಣೆಯ ಅನುಷ್ಠಾನ ಇರಲಿದೆ ಎನ್ನಲಾಗಿದೆ.
ಕೇರಳ ಕಲ್ಯಾಣ ಪಿಂಚಣಿ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಇದು ಕೇರಳದ ಆದಾಯ ಹಸ್ತಾಂತರದ ಒಂದು ಮಾದರಿ. ರಾಜ್ಯದ ಆರ್ಥಿಕ ಸ್ಥಿತಿ ನಿಶ್ಚಲವಾಗಿದೆ. ಹೊಸ ಹಣಕಾಸು ನೀತಿ ಅಗತ್ಯವಿದೆ ಎಂದೂ ಸಚಿವರು ಹೇಳಿರುವರು.
ಕೇರಳ ಎದುರಿಸುತ್ತಿರುವ ದೊಡ್ಡ ಸಮಸ್ಯೆ ನಿರುದ್ಯೋಗ. ಇದನ್ನು ಸರಿಪಡಿಸುವುದು ರಾಜ್ಯಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಇಂತಹ ಕಾರ್ಯಕ್ರಮಕ್ಕಾಗಿ ಬಜೆಟ್ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದರು.