ಕೊಚ್ಚಿ: ಲಕ್ಷದ್ವೀಪದಲ್ಲಿ ಕೋವಿಡ್ 19 ಇದೇ ಮೊದಲ ಬಾರಿಗೆ ನಿನ್ನೆ ದೃಢಪಟ್ಟಿದೆ. ಭಾರತೀಯ ರಿಸರ್ವ್ ಬೆಟಾಲಿಯನ್‍ನ ಅಡುಗೆಯವರಲ್ಲಿ ಈ ಸೋಂಕು ದೃಢಪಡಿಸಲಾಯಿತು. ದ್ವೀಪಕ್ಕೆ ಬಂದವರಿಗೆ ಸಂಪರ್ಕತಡೆಯಿಂದ ವಿನಾಯಿತಿ ನೀಡಲಾಗಿತ್ತು. ಈ ಬಳಿಕ ಇದೀಗ ಸೋಂಕು ಖಚಿತವಾಗಿದೆ. ಡಿಸೆಂಬರ್ ಕೊನೆಯ ವಾರ, ಲಕ್ಷದ್ವೀಪದ ಪ್ರಯಾಣ ನಿಬಂಧನೆ ತೆಗೆದುಹಾಕಲಾಗಿತ್ತು.
ನಲವತ್ತೆಂಟು ಗಂಟೆಗಳಲ್ಲಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಕಾರಾತ್ಮಕ ಪ್ರಮಾಣಪತ್ರವನ್ನು ಪಡೆದರೆ ಲಕ್ಷದ್ವೀಪದಲ್ಲಿ ಎಲ್ಲಿಯೂ ಪ್ರಯಾಣಿಸಬಹುದೆಂದು ಸೂಚಿಸಲಾಗಿತ್ತು. ಲಕ್ಷದ್ವೀಪ ನಿವಾಸಿಗಳು ಇದನ್ನು ವಿರೋಧಿಸಿದ್ದರು.
ಈ ಹಿಂದೆ ಲಕ್ಷದ್ವೀಪಕ್ಕೆ ಹೋಗಲು ಬಯಸುವವರು ಕೊಚ್ಚಿಯಲ್ಲಿ ಕ್ವಾರಂಟೈನ್ ನಂತರ ಒಂದು ವಾರದವರೆಗೆ ಅವರು ರೋಗಗಳಿಲ್ಲದೆ ಎಂದು ಖಚಿತಪಡಿಸಿಕೊಳ್ಳಬೇಕಾಗಿತ್ತು. ದ್ವೀಪಕ್ಕೆ ಪ್ರವೇಶಿಸಿದ ಬಳಿಕ ಹದಿನಾಲ್ಕು ದಿನಗಳ ಕಾಲ ಕ್ಯಾರೆಂಟೈನ್‍ನಲ್ಲಿ ಇರಬೇಕಾಗಿತ್ತು.
ಇದೀಗ ನಿಯಂತ್ರಣ ಕೈಬಿಟ್ಟ ಬೆನ್ನಿಗೇ ಕೋವಿಡ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.