ಆಲಪ್ಪುಳ: ಕೋವಿಡ್ ರಕ್ಷಣಾ ಚಟುವಟಿಕೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ವೈದ್ಯರಿಗೆ ಪೋಲೀಸರು ವಂದನೆ ಸಲ್ಲಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ದೂರು ನೀಡಲಾಗಿದೆ. ಮಹಿಳಾ ವೈದ್ಯರೊಬ್ಬರು ಗೃಹ ಇಲಾಖೆಗೆ ದೂರು ನೀಡಿದ್ದಾರೆ. ಆದರೆ ಇದು ಅಧಿಕೃತ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಸರ್ಕಾರ ವೈದ್ಯರನ್ನು ಸಮಧಾನಪಡಿಸಲು ಯತ್ನಿಸಿದೆ.
ದೂರುದಾರೆ ಅಲಪ್ಪುಳ ವೆನ್ಮನಿಯ ಡಾ.ನೀನಾ. ಮಾರ್ಚ್ 28 ರಂದು ದೂರು ದಾಖಲಿಸಲಾಗಿದೆ. ಇತ್ತೀಚೆಗೆ, ದೂರಿನ ಬಗ್ಗೆ ಡಿಜಿಪಿಗೆ ಪತ್ರವೂ ತಲಪಿದೆ. ಸರ್ಕಾರಿ ವೈದ್ಯರು ಡೆಪ್ಯೂಟಿ ಕಲೆಕ್ಟರ್ ಮತ್ತು ಡಿವೈಎಸ್ಪಿ ಹುದ್ದೆಗೆ ಸಮಾನರು. ಆದ್ದರಿಂದ ಅವರೂ ಸೆಲ್ಯೂಟ್ ಗೆ ಅರ್ಹರು ಎಂದು ಡಾ.ನೀನಾ ವಾದಿಸುತ್ತಾರೆ. ಆದರೆ ಕೇರಳ ಸರ್ಕಾರ ವೈದ್ಯಕೀಯ ಅಧಿಕಾರಿಗಳ ಸಂಘದಿಂದ ಸ್ಪಷ್ಟನೆ ಕೇಳಿದೆ.
ಪೋಲೀಸ್ ಅಧಿಕಾರಿಗಳ ಸಂಘಟನೆಯು ದೂರಿನ ವಿರುದ್ಧ ತೀವ್ರ ಟೀಕೆಗೆ ಗುರಿಯಾಗಿದೆ. ಸೆಲ್ಯೂಟ್ ಎನ್ನುವುದು ಕೇರಳ ಪೋಲೀಸರು ಸೇರಿದಂತೆ ವಿಶ್ವದ ಎಲ್ಲೆಡೆ ಬಳಕೆಯಲ್ಲಿರುವ ಕ್ರಮವಾಗಿದೆ. ಇದು ಪರಸ್ಪರ ಗೌರವ ತೋರ್ಪಡಿಸುವ ಪೋಲೀಸರದ್ದೇ ಆದ ಕ್ರಮ ಎಂದು ಕೇರಳ ಪೋಲೀಸ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಬಿಜು ಹೇಳಿರುವರು.
ಪೋಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿದ್ದಾಗ ಅವರಿಗೆ ಗೌರವ ಸೂಚಿಸಬೇಕೆಂಬುದು ಸಹಜ ವ್ಯವಸ್ಥೆ. ಆದರೆ, ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಡಾ. ನೀನಾ ಈ ಬಗ್ಗೆ ಉಲ್ಲೇಖಿಸಿ ಸರ್ಕಾರಿ ವೈದ್ಯರಿಗೂ ಇಂತಹ ಗೌರವ ಸೂಚಿಸಬೇಕಾದ್ದು ತಪ್ಪಾಗುವುದೇ, ಈ ಬಗ್ಗೆ ಸರ್ಕಾರ ಸೂಚನೆ ನೀಡಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೂರುಗಳು ಇನ್ನೂ ಬಂದಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.