ತಿರುವನಂತಪುರ: ರಾಜ್ಯದ ಖಾಸಗಿ ಬಸ್‍ಗಳು ಮತ್ತೆ ಸಂಚಾರ ಮೊಟಕುಗೊಳಿಸುವ ಸೂಚನೆ ನೀಡಿವೆ. ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸದಿದ್ದರೆ ಬಸ್ ಮಾಲೀಕರು ಸೇವೆಯನ್ನು ನಿಲುಗಡೆಗೊಳಿಸಲಾಗುವುದೆಂದು ಬಸ್ ಮಾಲಕರ ಸಂಘಟನೆಗಳು ತಿಳಿಸಿರುವುದಾಗಿ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ತಿ:ಳಿಸಿದ್ದಾರೆ. ಹೆಚ್ಚುತ್ತಿರುವ ಇಂಧನ ಬೆಲೆಗಳು ತೀವ್ರ ಸಂದಿಗ್ದತೆಗೆ ಕಾರಣವಾಗಿದೆ ಎಂದು ಬಸ್ ಮಾಲೀಕರು ಹೇಳಿರುವರು.
ಅನೇಕ ಖಾಸಗಿ ಬಸ್ಸುಗಳು ಲಾಕ್ ಡೌನ್ ಕೊನೆಗೊಳ್ಳುತ್ತಿರುವಂತೆ ಸಂಚಾರ ಪ್ರಾರಂಭಿಸಿವೆ. ಏತನ್ಮಧ್ಯೆ, ಇಂಧನ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಮೂರು ತಿಂಗಳಲ್ಲಿ ಡೀಸೆಲ್ ಬೆಲೆ 14 ರೂ.ಏರಿಕೆಯಾಗಿದೆ. ತೆರಿಗೆ ಪಾವತಿ ಗಡುವು ಈ ತಿಂಗಳ 30 ರಂದು ಕೊನೆಗೊಳ್ಳಲಿದೆ. ಇಂತಹ ಸಂಕಷ್ಟದಲ್ಲಿ ಪಾವತಿ ಗಡುವನ್ನು ವಿಸ್ತರಿಸದ ಹೊರತು ಸೇವೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಬಸ್ ಮಾಲೀಕರು ಸಾರಿಗೆ ಸಚಿವರಿಗೆ ಮಾಹಿತಿ ನೀಡಿರುವರು.
ತೆರಿಗೆಯ ಬಗ್ಗೆ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವರು ಉತ್ತರಿಸಿರುವರು. ಬಸ್ ದರಗಳ ಹೆಚ್ಚಳ ಪ್ರಸ್ತುತ ಚರ್ಚೆಯಲ್ಲಿಲ್ಲ. ಆದಾಗ್ಯೂ, ಇಂಧನ ಬೆಲೆಗಳ ತೀವ್ರ ಏರಿಕೆಯನ್ನು ಬಸ್ ಉದ್ಯಮವು ಭರಿಸಲಾರದು ಎಂಬುದು ಸರ್ಕಾರಕ್ಕೆ ತಿಳಿದಿದೆ ಎಂದು ಅವರು ಹೇಳಿದರು.