ಮುಳ್ಳೇರಿಯ: ವಿವಿಧ ಕ್ಷೇತ್ರಗಳ ಕಲಾವಿದರ ಸಂಘಟನೆಯಾದ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ (ಸವಾಕ್)ಇದರ ಕಾರಡ್ಕ ವಲಯದ ವಿಶೇಷ ಸಭೆ ವಲಯ ಸದಸ್ಯ ಮೋಹನ ಬಲ್ಲಾಳ್ ಇವರ ನಾಟೆಕಲ್ಲಿನ ಮನೆಯಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸವಾಕ್ ಸಂಘಟನೆಯು ಬಡ ಕಲಾವಿದರ ಬದುಕಿಗೆ ಆಶಾ ಕಿರಣವಾಗಿ ಸಂಕಷ್ಟದ ಸಂದರ್ಭ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಭರವಸೆಯಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟೀನ್ ಮಾತನಾಡಿ ಹೊಸ ಸದಸ್ಯತ್ವ ಪಡೆದ ಎಲ್ಲಾ ಕಲಾವಿದರಿಗೂ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ಹೇಳಿದರು.
ಸವಾಕ್ ವನಿತಾ ವಿಭಾಗದ ಜಿಲ್ಲಾ ಕಾರ್ಯದರ್ಶಿ ಭಾರತಿ ಮಾತನಾಡಿ ಬದುಕಿನ ಬಹುಪಾಲನ್ನೂ ಕಲಾ ಜೀವನಕ್ಕೆ ಮುಡಿಪಾಗಿಟ್ಟು ವೃದ್ಯಾಪ್ಯದಲ್ಲಿ ಮನೆಯಲ್ಲೇ ಇರುವ ಹಿರಿಯ ಕಲಾವಿದರನ್ನು ಗುರತಿಸಿ ಗೌರವಿಸುವ ಸಾಮಾಜಿಕ ಜವಾಬ್ದಾರಿಯನ್ನು ಕಾಯುಕೊಳ್ಳಬೇಕು ಎಂದು ಹೇಳಿದರು. ಸವಾಕ್ ಕಾರಡ್ಕ ವಲಯ ಅಧ್ಯಕ್ಷ ಮಧುಸೂದನ ಬಲ್ಲಾಳ್ ಮಾತನಾಡಿ ಸಂಘಟನೆಯು ಎಲ್ಲಾ ವಿಭಾಗದ ಸಮóಠಿಯ ಕೌಟುಂಬಿಕ ವಾತಾವರಣದ ಸಂಘಟನೆಯಾಗಿ ಕಲಾವಿದರಿಗೆ ನ್ಯಾಯದೊರಕಿಸುತ್ತಿದೆ. ರಾಜಕೀಯ ರಹಿತವಾಗಿ ಕಲಾವಿದರಿಂದ ಕಲಾವಿದರಿಗಾಗಿ ಕಾರ್ಯನಿರ್ವಹಿಸುವ ಸವಾಕ್ ಸಂಘಟನೆಯನ್ನು ಬಲಪಡಿಸಬೇಕು ಎಂದು ಹೇಳಿ ಹೊಸ ಸದಸ್ಯತ್ವ ಸ್ವೀಕರಿಸಿದ ಸದಸ್ಯರಿಗೆ ಶುಭ ಹಾರೈಸಿದರು. ಜಿಲ್ಲಾ ಸಮ್ಮೇಳನ ಫೆಬ್ರವರಿ 7 ರಂದು ನಡೆಯುವ ಬಗ್ಗೆ ಮಾಹಿತಿ ನೀಡಿ ಎಲ್ಲಾ ಸದಸ್ಯರು ಭಾಗವಹಿಸಬೇಕು ಎಂದು ತಿಳಿಸಿದರು. ಸದಸ್ಯರಾದ ರಶ್ಮಿತ ಮತ್ತು ರಾಘವ ಆಚಾರ್ಯ ಇವರಿಂದ ಗಾನ ಸಂಗೀತ ನಡೆಯಿತು. ಗಂಗಾಧರ ಬಲ್ಲಾಳ್ ಸ್ವಾಗತಿಸಿ, ವಂದಿಸಿದರು. ಹೊಸದಾಗಿ 10 ಕಲಾವಿದರು ಸದಸ್ಯತ್ವ ಸ್ವೀಕರಿಸಿದರು.