ಸಮರಸ ಚಿತ್ರ ಸುದ್ದಿ: ಉಪ್ಪಳ: ಕಾಯಿಲೆಯಿಂದ ಬಳಲುತ್ತಿರುವ ಉಪ್ಪಳ ಪಚ್ಲಂಪಾರೆ ನಿವಾಸಿ ಉಮೇಶ್ ಅವರಿಗೆ ಬೈಲ ಬಾಕುಡ ಹೆಲ್ಪ್ ಗ್ರೂಪಿನ 10ನೇ ತುರ್ತು ಸೇವಾ ಯೋಜನೆಯನ್ವಯ ಸಂಗ್ರಹಿಸಲಾದ ಧನಸಹಾಯದ ಮೊತ್ತವನ್ನು ಬಾಕುಡ ಸಮಾಜದ ಕೇರಳ-ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷೆ ಸುಜಾತಾ ಎಸ್. ಅವರು ಉಮೇಶ್ ಹೆತ್ತವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶರತ್ ಅರಿಮಲೆ, ಶ್ರೀವಾಸ್ ಕರಿಬೈಲು, ಅಂಕಿತ್ ಬೇಕೂರು, ಶಿವ ಪಚ್ಲಂಪಾರೆ, ಸುಮಂಗಲ ಪೊಸೋಟ್, ಪ್ರವೀಣ್ ಅಡ್ಕ, ಜಯಪ್ರಕಾಶ್ ಮಂಜೇಶ್ವರ ಉಪಸ್ಥಿತರಿದ್ದರು.