HEALTH TIPS

ಸೋಲಾರ್ ಪ್ರಕರಣದಲ್ಲಿ ಕಾನೂನು ಸಲಹೆ ಪಡೆಯಲಿರುವ ಸಿಬಿಐ

     ಕೊಚ್ಚಿ: ಸೋಲಾರ್ ಪ್ರಕರಣಗಳನ್ನು ತರಾತುರಿಯಲ್ಲಿ ಕೈಗೆತ್ತಿಕೊಳ್ಳುವುದಿಲ್ಲ ಎಮದು ಸಿಬಿಐ ತಿಳಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಸೆಕ್ರಟರಿಯೇಟ್ ಹಸ್ತಾಂತರಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತನಿಖೆಯನ್ನು ವಹಿಸಿಕೊಳ್ಳಬೇಕೆ ಎಂಬ ಬಗ್ಗೆ ಕಾನೂನು ಸಲಹೆ ಪಡೆದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು.

           ರಾಜ್ಯ ಸರ್ಕಾರ ಹಸ್ತಾಂತರಿಸಿದ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆಯನ್ನು ಸಿಬಿಐ ಪರಿಶೀಲಿಸಲಿದೆ. ಸಿಬಿಐಗೆ ನಿಕಟವಾಗಿರುವ ಮೂಲಗಳು ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಸೂಚಿಸಿವೆ.

         ಸಿಬಿಐ ಪ್ರಕರಣಗಳನ್ನು ಸಾಮಾನ್ಯವಾಗಿ ಹೈಕೋರ್ಟ್‍ಗಳು ಮತ್ತು ಸುಪ್ರೀಂ ಕೋರ್ಟ್‍ಗೆ ಉಲ್ಲೇಖಿಸಲಾಗುತ್ತದೆ. ಸಾರ್ವಜನಿಕ ವಲಯದ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳಲ್ಲಿನ ಹಣಕಾಸಿನ ವಂಚನೆಗಳು, ದೊಡ್ಡ ಪ್ರಮಾಣದ ವಿದೇಶಿ ಕರೆನ್ಸಿ ವಂಚನೆಗಳು, ರಫ್ತು ವಂಚನೆಗಳು, ಭಯೋತ್ಪಾದನೆ, ಬಾಂಬ್ ಸ್ಫೋಟಗಳು, ಅಪಹರಣಗಳು, ಇತ್ಯಾದಿಗಳನ್ನು ಸಾಮಾನ್ಯವಾಗಿ ರಾಜಕೀಯ ಮತ್ತು ಅಧಿಕಾರಿ ವರ್ಗದ ದೂರುಗಳನ್ನು ಸಿಬಿಐ ತನಿಖೆ ನಡೆಸುತ್ತದೆ. 

       ಸೋಲಾರ್  ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮಂಗಳವಾರ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಸೆಕ್ರಟರಿಯೇಟ್  ಸಿಬಿಐಗೆ ರವಾನಿಸಿದೆ. ಪ್ರಕರಣಗಳನ್ನು ವರ್ಗಾಯಿಸಲು ಕಾರಣ ದೂರುದಾರರ ಬೇಡಿಕೆಯಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

        ಸಿಬಿಐ ವರದಿಯ  ಪ್ರಕಾರ ಪ್ರಕರಣಗಳನ್ನು ತೆಗೆದುಕೊಳ್ಳಲು ಇದು ಮಾನ್ಯ ಕಾರಣವಲ್ಲ. ಈವರೆಗೆ ತನಿಖೆಯಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿಲ್ಲ.

          ಪ್ರಕರಣವನ್ನು ತನಿಖೆ ಮಾಡುವ ಏಜೆನ್ಸಿಗಳು ಅಂತರರಾಜ್ಯ ಸಂಪರ್ಕ ಹೊಂದಿರುವವರು ಪ್ರಕರಣದ ಭಾಗವೆಂದು ಇನ್ನೂ ಪತ್ತೆಹಚ್ಚಿಲ್ಲ. ಈ ಹಿನ್ನೆಲೆಯಲ್ಲಿಯೇ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಕಾನೂನು ಸಲಹೆ ಪಡೆಯಲು ನಿರ್ಧರಿಸಿದೆ.

        ರಾಜಕೀಯ ಹಿತಾಸಕ್ತಿಯ ಆಧಾರದ ಮೇಲೆ ಈ ಪ್ರಕರಣ ಸಿಬಿಐ ಅಂಗಳಕ್ಕೆ ಬಂತೆಂದು ಶಂಕಿಸಿದರೆ ಸಿಬಿಐ ಯಾವುದೇ ಪ್ರಕರಣದ ವಿಷಯಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಲಿದೆ. ಕಾನೂನು ಸಲಹೆ ಅನುಕೂಲಕರವಾಗಿದ್ದರೆ ಮಾತ್ರ ತನಿಖೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಬಿಐ ಉನ್ನತ ಅಧಿಕಾರಿಗಳು ಸ್ವತಃ ಹೇಳಿದ್ದಾರೆ.

        ಕಾನೂನು ಸಲಹೆಯಲ್ಲಿ ಬೇಡವೆಂದು ಸೂಚಿಸಿದರೆ ಸಿಬಿಐ ರಾಜ್ಯ ಸರ್ಕಾರದಿಂದ ವಿವರಣೆಯನ್ನು ಪಡೆಯುತ್ತದೆ. ಇದು ತೃಪ್ತಿಕರವಾಗಿಲ್ಲದಿದ್ದರೆ, ಸಿಬಿಐ ಈ ಪ್ರಕರಣವನ್ನು ತೆಗೆದುಕೊಳ್ಳುವುದಿಲ್ಲ. ಇದರೊಂದಿಗೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು  ಚುನಾವಣಾ ದೃಷ್ಟಿಯಲ್ಲಿ ಎನ್ನಲಾಗುತ್ತಿದೆ. ಇದರಿಂದ ಬಚವಾಗಲು ಸೋಲಾರ್ ಪ್ರಕರಣದ ದೂರುದಾರೆ ಸ್ವತಃ ನ್ಯಾಯಾಲಯಕ್ಕೆ ಹೋಗಬಹುದು.

       ಏತನ್ಮಧ್ಯೆ, ಸೋಲಾರ್ ಸಮಸ್ಯೆಯನ್ನು ಮತ್ತಷ್ಟು ಚರ್ಚಿಸಬಾರದು ಎಂದು ಎಡರಂಗದ ಅಭಿಪ್ರಾಯವಿದೆ. ಪಕ್ಷಕ್ಕೆ ಇದರಿಂದ ಹಿತವಾಗದೆಂದೂ ಎಚ್ಚರಿಸುತ್ತಿದ್ದಾರೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries