ಕುಂಬಳೆ: ಡಿವೈಎಫ್ ಯುವ ನಾಯಕರಾಗಿದ್ದ ದಿ.ಬಿ.ಎ.ಮುಹಮ್ಮದ್ ೧೦ನೇ ವರ್ಷದ ಸ್ಮರಣಾರ್ಥ ಉಚಿತ ಮೆಗಾ ವೈದ್ಯಕೀಯ ಶಿಬಿರವನ್ನು ಕುಡಾಲು ಮೇರ್ಕಳ ಡಿ.ವೈ.ಎಫ್.ಐ ಸಮಿತಿ ಮತ್ತು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಸಂಬಧಪಟ್ಟವರು ಬುಧವಾರ ಕುಂಬಳೆಯ ಫ್ರೆಸ್ ಪೋರಂ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರವು ಜನವರಿ ೧೦ ರಂದು ಭಾನುವಾರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ರ ವರೆಗೆ ಚೇವಾರು ಶ್ರೀಶಾರದ ಅನುದಾನಿತ ಶಾಲಾ ಆವರಣದಲ್ಲಿ ನಡೆಯಲಿದೆ. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಶಿಬಿರವನ್ನು ಉದ್ಘಾಟಿಸುವರು. ಡಿ.ವೈ.ಎಫ್.ಐ ಕುಡಾಲು ವಿಲೇಜ್ ಸಮಿತಿ ಅಧ್ಯಕ್ಷ ಆಸಿಫ್ ಮಾಣಿ ಅಧ್ಯಕ್ಷತೆ ವಹಿಸುವರು. ಕುಂಬಳೆ ಸಹಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮೊಹಮ್ಮದ್ ಶೆರೀಫ್, ಕಾರ್ಯದರ್ಶಿ ರತ್ನಾಕರ ಜಿ, ಡಿ.ವೈ.ಎಫ್.ಐ ಬ್ಲಾಕ್ ಕಾರ್ಯದರ್ಶಿ ಹ್ಯಾರಿಸ್ ಪೈವಳಿಕೆ, ಗ್ರಾ.ಪಂ.ಸದಸ್ಯ ಅಶೋಕ ಭಂಡಾರಿ ಕುಡಾಲು ಮೇರ್ಕಳ, ಸದಸ್ಯೆ ಇರ್ಷಾನ ಇಸ್ಮೆöÊಲ್, ಪೈವಳಿಕೆಯ ಅಗ್ರಿಕಲ್ಚರ್ ವೆಲ್ಪೇರ್ ಕೋಪರೇಟಿವ್ ಸೊಸೈಟಿ ನಿರ್ದೇಶಕ ಬಿ.ಎ.ಖಾದರ್, ಪದ್ಮಾವತಿ, ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಕಲಂದರ್ ಶಾಫಿ, ಪೈವಳಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಹಸ್ಬಿತ್ ಪೆರ್ಮುದೆ, ನಾಸಿರ್ ಚೇವಾರ್, ಬಶೀರ್ ಬಿ.ಎ., ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು.ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಮೊಹಮ್ಮದ್ ಶರೀಫ್ ವಿ(ಫಿಸೀಶಿಯನ್), ಡಾ.ಅಹಮ್ಮದ್ ರಶೀದ್(ಫೀಡಿಯಾಟ್ರೀಶಿಯನ್), ಡಾ.ಸಂದೀಪ್ ಕೆ.ಆರ್.ಭಟ್(ಓರ್ತೋ), ಡಾ.ಮುಬೀನಾ ಬೇಗಂ ಅಬ್ದುಲ್ಲ(ಪ್ರಸೂತಿ), ಡಾ.ಕಾರ್ತಿಕ್ ಕೆ.ಎಸ್(ಸರ್ಜಿಕಲ್ ಓಂಕೋಲಜಿ), ಡಾ.ಸಂದೀಪ್ ಕೆ.ಕೆ(ಜನರಲ್ ಸರ್ಜನ್), ಡಾ.ರಾಹುಲ್ ಕೃಷ್ಣ(ಇ.ಎನ್.ಟಿ.), ಡಾ.ಸಾವಿತ್ರಿ ಎಸ್.ರಾಜ್(ಚರ್ಮರೋಗ), ಡಾ.ವಿದ್ಯಾ ಸಾಗರ್(ವೈದ್ಯಾಧಿಕಾರಿ)ಪಾಲ್ಗೊಂಡು ಪರೀಕ್ಷೆ ಮತ್ತು ಚಿಕಿತ್ಸೆ ನೀಡುವರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಕುಡಾಲ್ ಮೇರ್ಕಳ ಸ್ಥಳೀಯ ಕಾರ್ಯದರ್ಶಿ ಬಶೀರ್ ಬಿ.ಎ, ಡಿವೈಎಫ್‌ಐ ವಿಲೇಜ್ ಕಾರ್ಯದರ್ಶಿ ವಿನೋದ್, ಅಧ್ಯಕ್ಷ ಆಸಿಫ್ ಮಾಣಿ ಮತ್ತು ಜೊತೆ ಕಾರ್ಯದರ್ಶಿ ಸಿದ್ದೀಕ್ ಉಪಸ್ಥಿತರಿದ್ದರು.