ಕಾಸರಗೋಡು: ನಗರಸಭೆಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೂ ಒಂದು ಸೀಟು ಲಭಿಸುವ ಮೂಲಕ ಅದೃಷ್ಟ ಖುಲಾಯಿಸಿದೆ. ವಿದ್ಯಾಭ್ಯಾಸ ಸ್ಥಾಯೀ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ರಜನಿ ಹಾಗೂ ಮುಸ್ಲಿಂಲೀಗಿನಿಂದ ಮಮ್ಮು ಚಾಲ ಅವರಿಗೆ ಸಮಾನ ಮತಗಳು ಲಭಿಸಿದೆ. ಇದರಿಂದ ಚೀಟಿ ಎತ್ತಬೇಕಾಗಿ ಬಂದಿದ್ದು, ಈ ಸಂದರ್ಭ ರಜನಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಒಟ್ಟು ಐದು ಸ್ಥಾಯೀ ಸಮಿತಿಗಳ ಪೈಕಿ ಮುಸ್ಲಿಂಲೀಗಿಗೆ ನಾಲ್ಕು ಹಾಗೂ ಒಂದು ಬಿಜೆಪಿ ಪಾಲಾಗಿದೆ.