HEALTH TIPS

ಪಥಸಂಚಲನದಲ್ಲಿ ಸ್ತಬ್ಧಚಿತ್ರ: ದೇಶದ ಸಾರ್ವಭೌಮತೆ, ಸಂಸ್ಕೃತಿ, ಪರಂಪರೆ ಅನಾವರಣ

     ನವದೆಹಲಿ: ದೇಶದ ಸೇನಾ ಸಾಮರ್ಥ್ಯ, ಸಾರ್ವಭೌಮತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅನಾವರಣಗೊಂಡಿತು.

      ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ರಫೇಲ್ ಯುದ್ಧವಿಮಾನ ಕಾಣಿಸಿಕೊಂಡಿತು. ಅಲ್ಲದೆ, ಸೇನೆಯ ಹಿರಿಮೆಗಳಾದ ಟಿ-20 ಟ್ಯಾಂಕ್‌ಗಳು, ಸ್ಯಾಮ್‌ ವಿಜಯ್‌ ವಿದ್ಯುನ್ಮಾನ ವ್ಯವಸ್ಥೆ, ಸುಖೋಯ್‌-30, ಎಂಕೆಐ ಫೈಟರ್‌ ಜೆಟ್‌ಗಳು ರಾಜಪಥದಲ್ಲಿ ಸಾಗಿದ್ದು, ಪ್ರೇಕ್ಷಕರ ಅಭಿಮಾನದ ಕರತಾಡನಕ್ಕೆ ಪಾತ್ರವಾದವು.

      ದೇಶದ ಸಾಂಸ್ಕೃತಿಕ ಮತ್ತು ಪಾರಂಪರಿಕ ಹಿರಿಮೆ ಹಾಗೂ ಆರ್ಥಿಕ ಪ್ರಗತಿಯನ್ನು ಬಿಂಬಿಸುವ 17 ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 9 ವಿವಿಧ ಸಚಿವಾಲಯಗಳನ್ನು ಈ ಸ್ತಬ್ಧಚಿತ್ರಗಳು ಪ್ರತಿನಿಧಿಸಿದ್ದವು. ಸೇನೆಯ 6 ಸ್ತಬ್ಧಚಿತ್ರಗಳೂ ಭಾಗಿಯಾಗಿದ್ದು ಗಮನಾರ್ಹ.

      ಶಾಲಾ ಮಕ್ಕಳು ವಿವಿಧ ಜಾನಪದ ನೃತ್ಯ ಮತ್ತು ಕರಕುಶಲ ಕಲೆಯ ಕೌಶಲವನ್ನು ಬಿಂಬಿಸಿದ್ದು, ಸಂಸ್ಕತಿ ಮತ್ತು ಪರಂಪರೆಯೂ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ ಎಂಬುದನ್ನು ಸಾರಿತು. ಒಡಿಶಾದ ಬಜಸಲ್ ನೃತ್ಯ, ಫಿಟ್‌ ಇಂಡಿಯಾ ಅಭಿಯಾನ್ ಮತ್ತು ಆತ್ಮನಿರ್ಭರ್ ಭಾರತ್ ಸ್ತಬ್ಧಚಿತ್ರಗಳು ಇದ್ದವು.

       ಪಥಸಂಚಲನದಲ್ಲಿ ಬಾಂಗ್ಲಾದೇಶದ ಸಶಸ್ತ್ರ ಪಡೆಯ 122 ಸದಸ್ಯರ ತುಕಡಿಯೂ ಇತ್ತು. 1971ರ ಹೋರಾಟದಲ್ಲಿ ಭಾಗಿಯಾಗಿದ್ದ ಬಾಂಗ್ಲಾದೇಶದ ಮುಕ್ತಿಜೋಧಾಸ್ ಸಾಧನೆಯನ್ನು ಇದು ಬಿಂಬಿಸಿತು. ಭಾರತ ಈ ವರ್ಷ 'ಸ್ವರ್ಣಿಂ ವಿಜಯ ವರ್ಷ್‌' ಎಂದು 1971ರಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವನ್ನು ಆಚರಿಸುತ್ತಿದೆ. ಈ ಯುದ್ಧದ ಗೆಲುವು ಬಳಿಕ ಬಾಂಗ್ಲಾದೇಶ ಅಸ್ತಿತ್ವ ತಳೆಯಲು ಕಾರಣವಾಗಿತ್ತು.

        ಉಳಿದಂತೆ ಭಾರತೀಯ ಸೇನೆಯು ಟಿ.90 ಭೀಷ್ಮ, ಇನ್‌ಫೆಂಟ್ರಿ ಯುದ್ಧವಾಹನ ಬಿಎಂಬಿ-2-ಸಾರಥ್, ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆ, ಪಿನಾಕಾ -ಬಹುಹಂತದ ಉಡಾವಣಾ ವಾಹಕ ಅನ್ನು ಪಥಸಂಚಲನದಲ್ಲಿ ಪ್ರದರ್ಶಿಸಿತು.

     ನೌಕಾಪಡೆಯ ಸ್ತಬ್ಧಚಿತ್ರವು ಭಾರತೀಯ ನೌಕಾದಳದ ಹಡಗು ಐಎನ್‌ಎಸ್‌ ವಿಕ್ರಾಂತ್‌ ಮಾದರಿಯನ್ನು ಒಳಗೊಂಡಿತ್ತು. ವಾಯುಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ 'ತೇಜಸ್' ಲಘುಯುದ್ಧ ವಿಮಾನ, ಧ್ರುವಾಸ್ತ್ರ ಕ್ಷಿಪಣಿ, ಹಗುರಯುದ್ಧ ಹೆಲಿಕಾಫ್ಟರ್, ಸುಖೋಯ್‌ -30 ಎಂಕೆಐ ಫೈಟರ್ ಜೆಟ್‌, ರೋಹಿಣಿ ರಾಡಾರ್ ಅನ್ನು ಪ್ರದರ್ಶಿಸಿತು.

       ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಪಥಸಂಚಲನ ಆರಂಭವಾಯಿತು. ತ್ರಿವರ್ಣ ಧ್ವರೋಹಣದ ಬಳಿಕ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪಥಸಂಚಲನದ ಗೌರವವಂದನೆ ಸ್ವೀಕರಿಸಿದರು.

       ವಿಜಯನಗರ ವೈಭವ ಬಿಂಬಿಸುವ ಕರ್ನಾಟಕದ ಸ್ತಬ್ಧಚಿತ್ರವಲ್ಲದೆ ಗುಜರಾತ್, ಅಸ್ಸಾಂ, ತಮಿಳುನಾಡು, ಮಹಾರಾಷ್ಟ್ರ, ಉತ್ತರರಾಖಂಡ, ಚತ್ತೀಸ್‌ಗಡ, ಪಂಜಾಬ್‌, ತ್ರಿಪುರಾ, ಪಶ್ಚಿಮ ಬಂಗಾಳ ಸೇರಿ 17 ರಾಜ್ಯಗಳ ಸ್ತಬ್ದಚಿತ್ರಗಳು ಭಾಗಿಯಾಗಿದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries