ಕಾಸರಗೋಡು: ಪ್ರೆಸ್‍ಕ್ಲಬ್ ಸ್ಥಾಪಕ ಪದಾಧಿಕಾರಿಗಳಲ್ಲಿ ಒಬ್ಬರಾದ ಕೃಷ್ಣನ್ ಸ್ಮಾರಕ ಸ್ಥಳೀಯ ಮಾಧ್ಯಮ ಪುರಸ್ಕಾರಕ್ಕೆ ಪತ್ರಕರ್ತ ವಿ.ಇ ಉಣ್ಣಿಕೃಷ್ಣನ್ ಆಯ್ಕೆಯಾಗಿದ್ದಾರೆ. ಗ್ರಾಮೀಣ ವರದಿಗಾರಿಕೆಗಾಗಿ ಪುರಸ್ಕಾರ ನೀಡಲಾಗುತ್ತಿದ್ದು, ಇವರು ಎಣ್ಮಕಜೆ ಪಂಚಾಯಿತಿಯ ಕಜಂಪಾಡಿ ಕಾಲನಿಯ ಸಮಸ್ಯೆಗಳ ಬಗ್ಗೆ ತಯಾರಿಸಿದ ವಿಶೇಷ ವರದಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಹಿರಿಯ ಪತ್ರಕರ್ತರಾದ ವಿ.ವಿ ಪ್ರಭಾಕರನ್, ಸನ್ನಿಜೋಸೆಫ್ ಹಾಗೂ ಜಯಕೃಷ್ಣನ್ ನರಿಕುಟ್ಟಿ ಅವರನ್ನೊಳಗೊಂಡ ಜ್ಯೂರಿ ಸಮಿತಿ ಈ ಅಯ್ಕೆ ನಡೆಸಿದೆ. ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಜ. 27ರಂದು ನಡೆಯುವ ಕೆ. ಕೃಷ್ಣನ್ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಸಕ ಎಂ. ರಾಜಗೋಪಾಲನ್ ಪ್ರಶಸ್ತಿಪ್ರದಾನ ಮಾಡುವರು. ಎ. ಅಬ್ದುಲ್ ರಹಮಾನ್ ಸಂಸ್ಮರಣಾ ಭಾಷಣ ಮಾಡುವರು.