ಫರೋಕ್: ರೈಲ್ವೆ ಹಳಿಗಳಲ್ಲಿನ ಜಲ್ಲಿಕಲ್ಲುಗಳ ತುಂಡುಗಳಿಂದ ಉಂಟಾಗಬಹುದಾಗಿದ್ದ ಭಾರೀ ದುರಂತವೊಂದು ಸಕಾಲದಲ್ಲಿ ಗಮನಕ್ಕೆ ಬಂದು ಸುದ್ಯೆವವಶಾತ್ ಪಾರಾದ ಘಟನೆ ನಡೆದಿದೆ. ಕೋಝಿಕೋಡ್ ಫರೋಕ್ ಬಳಿಯ ಕುಂಡೈಥೋಡು ಎಂಬಲ್ಲಿರುವ ರೈಲ್ವೆ ಹಳಿ ಮೇಲೆ ಎಂಟು ಜಲ್ಲಿ ತುಂಡುಗಳು ಪತ್ತೆಯಾಗಿವೆ.
ಎರ್ನಾಡ್ ಎಕ್ಸ್‌ಪ್ರೆಸ್‌ನ ಎಂಜಿನ್ ಚಾಲಕನು ಕಲ್ಲುಗಳನ್ನು ಗಮನಿಸಿ ದುರಂತವನ್ನು ತಪ್ಪಿಸಿದ್ದರಿಂದ ಅಪಘಾತದಿಂದ ಪಾರಾಗಲಾಯಿತು.
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎರಡನೇ ಟ್ರ್ಯಾಕ್ ಕುಂಡೈಥೋಡ್ ರೈಲ್ವೆ ಹಳಿಯಲ್ಲಿ ಈ ಘಟನೆ ನಡೆದಿದೆ.
ಟ್ರ್ಯಾಕ್‌ನಲ್ಲಿಯೇ ಜಲ್ಲಿಗಳು ಹರಡಲ್ಪಟ್ಟಿದ್ದವು . ಎರಡನೇ ಟ್ರ್ಯಾಕ್ ಮೂಲಕ ಬರುತ್ತಿದ್ದ ಎರ್ನಾಡ್ ಎಕ್ಸ್‌ಪ್ರೆಸ್ ಎಂಜಿನ್‌ನ ಚಾಲಕ, ಜಲ್ಲಿ ತುಂಡುಗಳನ್ನು ಗಮನಿಸಿದನು.ಅಷ್ಟರಲ್ಲಿ ರೈಲಿನ ವೇಗವನ್ನು ತಗ್ಗಿಸಲಾಯಿತಾದರೂ ಕೆಲವು ಜಲ್ಲಿಗಳ ಮೇಲೆ ರೈಲು ಸಾಗಿತು.
ನೌಕರರು ಕೋಝಿಕೋಡ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಪರಿಸರ