ತಿರುವನಂತಪುರ: ರಾಜ್ಯಕ್ಕೆ ಐದು ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡುವಂತೆ ಕೇರಳ ಕೇಂದ್ರ ಸರ್ಕಾರವನ್ನು ಕೋರಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸ್‍ಗಾಗಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಮತ್ತು ಕೇಂದ್ರ ಸರ್ಕಾರದ ಅನುಮೋದನೆಯ ನೀಡಿದ ಬಳಿಕ ಕೇರಳ ಅಪೇಕ್ಷೆ ವ್ಯಕ್ತಪಡಿಸಿದೆ.
ಮೊದಲ ಹಂತದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಮೂರು ಲಕ್ಷ ಲಸಿಕೆ ಹಾಕಲು ಸರ್ಕಾರ ಯೋಜಿಸಿದೆ. ಈ ಎಲ್ಲದಕ್ಕೂ ನಾಲ್ಕು-ಡೋಸ್ ಅಗತ್ಯವಿರುತ್ತದೆ ಎಂಬುದು ನಿರೀಕ್ಷೆಯಾಗಿದೆ. ಉಳಿದ 50 ಲಕ್ಷ ಪ್ರಮಾಣವನ್ನು ವೃದ್ಧರಿಗೆ ನೀಡಲಾಗುವುದು.
ರಾಷ್ಟ್ರದಲ್ಲಿ ಲಸಿಕೆ ವಿತರಣೆ ಪ್ರಾರಂಭಿಸುವಾಗ ಕೇರಳವನ್ನು ಮೊದಲ ಪಟ್ಟಿಗೆ ಸೇರಿಸಲು ರಾಜ್ಯವು ಕೇಂದ್ರವನ್ನು ಕೇಳಿದೆ. ಕೇರಳದಲ್ಲಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಮತ್ತು ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣ ಹೆಚ್ಚುತ್ತಿರುವುದನ್ನು ಪರಿಗಣಿಸಿ ಈ ಅಪೇಕ್ಷೆ ಸಲ್ಲಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮಧುಮೇಹ ಸೇರಿದಂತೆ ಇತರ ಸಾಮಾನ್ಯ ಕಾಯಿಲೆಗಳು ಹೆಚ್ಚಿರುವ ರಾಜ್ಯದಲ್ಲಿ, ಕೊರೊನಾ ಸೋಂಕು ಹರಡುವಿಕೆಯು ಅಧಿಕವಾಗಿದೆ. ಆದರೆ ಮರಣ ಪ್ರಮಾಣ ನಿಯಂತ್ರಣ ಕಾಯ್ದುಕೊಳ್ಳಲಾಗಿದೆ. ಪ್ರಸ್ತುತ, ಹೊಸ ನಮೂನೆಯ ಬದಲಾಯಿಸಲ್ಪಟ್ಟ ತೀವ್ರ ಸ್ವರೂಪದ ವೈರಸ್ ಇರುವಿಕೆ ರಾಜ್ಯದಲ್ಲಿ ದೃಢಪಡಿಸಲಾಗಿದೆ. ಇದು ಸೋಂಕಿನ ಹರಡುವಿಕೆಯನ್ನು ಇನ್ನಷ್ಟು ಹೆಚ್ಚಿಸುವ ಭೀತಿಯಿದೆ. ಆದ್ದರಿಂದ, ರೋಗ ನಿಯಂತ್ರಣಕ್ಕೆ ಲಸಿಕೆ ಅತ್ಯಗತ್ಯ ಎಂದು ತಿಳಿಸುವ ಅಂಕಿಅಂಶಗಳು ಮತ್ತು ದಾಖಲೆಗಳೊಂದಿಗೆ ಕೇರಳ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸ್ ಅನುಮೋದನೆ ಪಡೆದಿದ್ದರೂ, ಕೋವಿಶೀಲ್ಡ್ ನ್ನು ಕೇರಳಕ್ಕೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ ಎಂದು ಐಎಂಎ ಪದಾಧಿಕಾರಿ ಡಾ. ಜುಲ್ಫಿ ನೋವಾ ಹೇಳಿದರು. ಲಸಿಕೆ ಹೇಗೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ನಿರ್ದಿಷ್ಟಪಡಿಸಿಲ್ಲ.
ಕಳೆದ ಶನಿವಾರದ ಲಸಿಕೆ ಡ್ರೈ ರನ್ ಯಶಸ್ವಿಯಾಗಿದೆ. ಆದ್ದರಿಂದ ವಿತರಣೆಗೆ ವ್ಯವಸ್ಥೆ ಸಿದ್ಧವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.