ಪ್ರತಿಭಟನಾಕಾರರಿಗೆ ನೀಡಿರುವ ನೋಟಿಸ್ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಸರ್ಕಾರದ ಅಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಇಂತಹ ನೋಟಿಸ್‌ಗಳ ವಿರುದ್ಧ ಮುಂದಿನ ದಿನಗಳ ಕಾನೂನು ಕ್ರಮ ಕೈಗೊಳ್ಳಲು ಆಗರಹಿಸಲಾಗುವುದು ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಆಕ್ರೋಶ ಹೊರಹಾಕಿದೆ.
ನೋಟಿಸ್ ಪಡೆದಿರುವ ಯಾವುದೇ ರೈತರು ಎನ್‌ಐಎ ಮುಂದೆ ಹಾಜರಾಗಬಾರದುಎಂದು ನಿರ್ಧರಿಸಲಾಗಿದೆ. ಇದು ಪ್ರತಿಭಟನೆಯ ಸಂಕೇತವಾಗಲಿದೆ, ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮಾಡುವ ಯಾವುದೇ ಉಪಾಯದಿಂದಲೂ ಏನೂ ಪ್ರಯೋಜನವಿಲ್ಲ ಎಂದಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಕೃಷಿ ಸಚಿವಾಲಯದ ನಡುವೆ ಶುಕ್ರವಾರ ನಡೆದ 9ನೇ ಸುತ್ತಿನ ಮಾತುಕತೆಯು ವಿಫಲವಾಗಿದೆ.
. ರೈತರು ಮತ್ತು ಸರ್ಕಾರವು ತಮ್ಮ ಪಟ್ಟುಗಳನ್ನು ಸಡಿಲಿಸದ ಕಾರಣ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ಜನವರಿ 19ಕ್ಕೆ 10ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.
ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನೋಟಿಸ್‌ಗಳನ್ನು ನೋಡುತ್ತಿದೆ, ಆಮೂಲಕ ಕೇಂದ್ರ ಸರ್ಕಾರದ ರೈತರಿಗೆ ಕಿರುಕುಳ ನೀಡುತ್ತಿದೆ ಎನ್ನುವ ಗಂಭೀರ ಆರೋಪ ಇದಾಗಿದೆ.