ತಿರುವನಂತಪುರ: ಜನರ ಸಮಸ್ಯೆಗಳು ಮತ್ತು ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಸಚಿವರ ನೇತೃತ್ವದಲ್ಲಿ ಫೆಬ್ರವರಿ 1 ರಿಂದ 18 ರವರೆಗೆ ಜಿಲ್ಲಾ ಮಟ್ಟದಲ್ಲಿ ಅದಾಲತ್ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆನ್‍ಲೈನ್‍ನಲ್ಲಿ ಅಥವಾ ಅಕ್ಷಯ ಕೇಂದ್ರಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ. ಅಕ್ಷಯ ಕೇಂದ್ರಗಳಿಗೆ ಶುಲ್ಕವನ್ನು ಸರ್ಕಾರ ಪಾವತಿಸಲಿದೆ. ಈ ಹಿಂದೆ ನೀಡಲಾದ ದೂರುಗಳು ಬಾಕಿ ಉಳಿದಿದ್ದರೂ ಹೊಸ ದೂರುಗಳನ್ನು ಸ್ವೀಕರಿಸಲಾಗುತ್ತದೆ.
ಅದಾಲತ್ ಫೆಬ್ರವರಿ 1, 2 ಮತ್ತು 4 ರಂದು ಐದು ಜಿಲ್ಲೆಗಳಾದ ಕಣ್ಣೂರು, ತ್ರಿಶೂರ್, ಆಲಪ್ಪುಳ, ಕೊಲ್ಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ನಡೆಯಲಿದೆ. ಈ ಜಿಲ್ಲೆಗಳಲ್ಲಿ ಜನವರಿ 24 ರಂದು ಬೆಳಿಗ್ಗೆ ಯಿಂದ 28 ರ ಮಧ್ಯಾಹ್ನದ ವರೆಗೆ ದೂರುಗಳನ್ನು ನೀಡಬಹುದು.
ಫೆಬ್ರವರಿ 8, 9 ಮತ್ತು 11 ರಂದು ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಅದಾಲತ್ ನಡೆಸಲಾಗುವುದು. ಈ ಜಿಲ್ಲೆಗಳಲ್ಲಿ ಜನವರಿ 27 ರಂದು ಮಧ್ಯಾಹ್ನದಿಂದ ಫೆಬ್ರವರಿ 2 ಅಪರಾಹ್ನ 2 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಫೆಬ್ರವರಿ 15, 16 ಮತ್ತು 18 ರಂದು ಪತ್ತನಂತಿಟ್ಟು, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಅದಾಲತ್ ಏರ್ಪಡಿಸಲಾಗಿದೆ. ಫೆಬ್ರವರಿ 3 ರಿಂದ ಮಧ್ಯಾಹ್ನ 9 ರಿಂದ ಫೆಬ್ರವರಿ 9 ರವರೆಗೆ ಈ ಜಿಲ್ಲೆಗಳಲ್ಲಿ ದೂರುಗಳು ಸ್ವೀಕರಿಸಲ್ಪಡುತ್ತವೆ.
ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವವರಿಗೆ ಅರ್ಜಿ ಸಲ್ಲಿಸಲು ವಿಶೇಷ ಸೌಲಭ್ಯಗಳನ್ನು ಸ್ಥಾಪಿಸುವಂತೆ ಅಕ್ಷಯ ಕೇಂದ್ರಗಳಿಗೆ ಸಿಎಂ ನಿರ್ದೇಶನ ನೀಡಿದರು. ಆದಿವಾಸಿಗಳಿರುವಲ್ಲಿಗೆ ತೆರಳಿ ದೂರು ಸ್ವೀಕರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳುಈ ನಿಟ್ಟಿನಲ್ಲಿ ಉಸ್ತುವಾರಿವಹಿಸಲು ಸೂಚನೆ ನೀಡಲಾಗಿದೆ. ಸಮಾಧಾನಕರವಾಗಿಅದಾಲತ್ ಮುನ್ನಡೆಯಲು ಜಿಲ್ಲಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಅವರಿಗೆ ಸಹಾಯ ಮಾಡಲು ಜಿಲ್ಲೆಗಳಿಗೆ ಕಾರ್ಯದರ್ಶಿಗಳನ್ನು ನಿಯೋಜಿಸಲಾಗುವುದು.
ದೂರುಗಳನ್ನು ನಿರ್ವಹಿಸಲು ಅಕ್ಷಯ ಕೇಂದ್ರಗಳಿಗೆ ಆನ್‍ಲೈನ್‍ನಲ್ಲಿ ತರಬೇತಿ ನೀಡಲಾಗುವುದು. ದೂರುಗಳನ್ನು ಪರಿಶೀಲಿಸಲು ಕಲೆಕ್ಟರ್ ಪ್ರತಿ ಜಿಲ್ಲೆಯ ಐವರು ಸದಸ್ಯರ ತಂಡವನ್ನು ನೇಮಿಸಲಿದ್ದಾರೆ. ಈ ತಂಡವು ಕಂದಾಯ, ನಾಗರಿಕ ಸರಬರಾಜು, ಸ್ಥಳೀಯ ಸರ್ಕಾರ, ಸಾಮಾಜಿಕ ನ್ಯಾಯ ಮತ್ತು ಕೃಷಿ ಐದು ಇಲಾಖೆಗಳ ಪ್ರಮುಖ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸ್ವೀಕರಿಸಿದ ನಂತರ, ತಂಡವು ಅದನ್ನು ಜಿಲ್ಲಾ ಮಟ್ಟದಲ್ಲಿ ಪರಿಹರಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಪರಿಹರಿಸಬಹುದು ಎಂದು ವರ್ಗೀಕರಿಸುತ್ತದೆ. ದೂರುದಾರರು ನೇರವಾಗಿ ನ್ಯಾಯಾಲಯಕ್ಕೆ ಉತ್ತರವನ್ನು ಸಂಗ್ರಹಿಸುವ ರೀತಿಯಲ್ಲಿ ದೂರುಗಳನ್ನು ಪರಿಹರಿಸಬೇಕು.
ಕುಂದುಕೊರತೆ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೀಡುವ ಉತ್ತರ ಮತ್ತು ವಿವರಣೆಯು ಸ್ಪಷ್ಟವಾಗಿರಬೇಕು. ದೂರನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಅದನ್ನು ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಉತ್ತರದಲ್ಲಿ ಸಮಸ್ಯೆಗೆ ಸಂಬಂಧಿಸಿದಂತೆ ಸಂಪರ್ಕಿಸಬೇಕಾದ ಅಧಿಕಾರಿಯ ವಿವರಗಳನ್ನು ಒಳಗೊಂಡಿರಬೇಕು ಎಂದು ಸಿಎಂ ಸೂಚಿಸಿದರು.
ಸಾಂತ್ವನದ ಸ್ಪರ್ಶದ ಮೂಲಕ ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ಸ್ವೀಕರಿಸಿದ ಅರ್ಜಿಗಳನ್ನು ಸಹ ತುರ್ತಾಗಿ ಪರಿಶೀಲಿಸಿ ಪರಿಹರಿಸಬೇಕು. ಅದಾಲತ್‍ನಲ್ಲಿ ಸ್ವೀಕರಿಸಿದ ದೂರುಗಳನ್ನು ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ, ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಅಥವಾ ನೀತಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪರಿಹರಿಸಬಹುದು. ಜಿಲ್ಲಾಧಿಕಾರಿಗಳು ವಿವರಗಳನ್ನು ಒಗ್ಗೂಡಿಸಿ ಇಂತಹ ವಿಷಯಗಳನ್ನು ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಮುಖ್ಯಮಂತ್ರಿ ತಿಳಿಸಿರುವರು.
ಮುಖ್ಯಮಂತ್ರಿಯ ಕುಂದುಕೊರತೆ ನಿವಾರಣಾ ಸೆಲ್ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತಿದೆ. ಈವರೆಗೆ ಬಂದ 3,21,049 ದೂರುಗಳಲ್ಲಿ 2,72,441 ದೂರುಗಳನ್ನು ಬಗೆಹರಿಸಲಾಗಿದೆ. ಸಿಎಂಒ ಪೆÇೀರ್ಟಲ್ ಈವರೆಗೆ 5,74,220 ಅರ್ಜಿಗಳನ್ನು ಸ್ವೀಕರಿಸಿದೆ. ಈ ಪೈಕಿ 34,778 ಬಾಕಿ ಉಳಿದಿವೆ. ಇದರ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದರೆ ಅವುಗಳನ್ನು ನೇರವಾಗಿ ಉನ್ನತ ಮಟ್ಟದಲ್ಲಿ ಬಗೆಹರಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಹೇಳಿದರು.
ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ವಿಶ್ವಾಸ್ ಮೆಹ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಪಿ. ಡಾ. ಜಾಯ್, ಪ್ರಧಾನ ಕಾರ್ಯದರ್ಶಿ, ಕಂದಾಯ; ಜಯತಿಲಕ್ ಉಪಸ್ಥಿತರಿದ್ದರು.