ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಗೀತ ಸಂಗೀತ ಎಂಬ ಕಾರ್ಯಕ್ರಮವು ಸೋಮವಾರ ಜರಗಿತು. ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ತಿಕ್ ಕುಮಾರ್ ಕಡೆಕಲ್ಲು ಕೊಳಲಿನಲ್ಲಿ ಸುಶ್ರಾವ್ಯವಾಗಿ ಭಕ್ತಿ ಗೀತೆಗಳನ್ನು ನುಡಿಸಿದರು. ದೀಪ್ತಿ ಕೆ.ಎಸ್ ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿದರು. ಆತ್ರೇಯಿ ಭಟ್ ಕೆ ಕೀಬೋರ್ಡ್ ನಲ್ಲಿ ಭಾವಗೀತೆ ಭಕ್ತಿಗೀತೆಗಳನ್ನು ನುಡಿಸಿದರು. ಕಲಾವಿದರಿಗೆ ಪುಸ್ತಕ ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.
ವೈ.ವಿ ಸುಬ್ರಹ್ಮಣ್ಯ ಸ್ವಾಗತಿಸಿದರು. ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ವೇಣುಗೋಪಾಲ್ ಕಳೆಯತ್ತೋಡಿ ಪ್ರತಿಭೆಗಳ ಪರಿಚಯ ಮಾಡಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ವಂದಿಸಿದರು.ಸ್ಥಳೀಯ ಪ್ರತಿಭೆಗಳಿಂದ ನಡೆದ ಈ ಕಾರ್ಯಕ್ರಮವು ಶ್ರೋತೃಗಳ ಮನರಂಜಿಸುವಲ್ಲಿ ಯಶಸ್ವಿಯಾಯಿತು.