ತಿರುವನಂತಪುರ: ಹರಿಪ್ಪಾಡ್ ಕ್ಷೇತ್ರದಿಂದ ಸ್ಥಾನ ಬದಲಾಯಿಸಿ ಸ್ಪರ್ಧಿಸಲು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಯೋಜಿಸುತ್ತಿದ್ದಾರೆ ಎಂಬ ವದಂತಿಗಳಿಗೆ ಸಂಸದ ಕೆ.ಮುರಲೀಧರನ್ ಪ್ರತಿಕ್ರಿಯಿಸಿದ್ದಾರೆ. ಸಿಟ್ಟಿಂಗ್ ಕ್ಷೇತ್ರಗಳನ್ನು ಶಾಸಕರು ಬದಲಾಯಿಸಬಾರದು ಎಂದು ಮುರಲೀಧರನ್ ಹೇಳಿದರು.
ತಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೈಕಮಾಂಡ್ ಹೇಳಿದೆ ಎಂದು ಕೆ.ಮುರಳೀಧರನ್ ಹೇಳಿಕೆ ನೀಡಿರುವರು. ಇದೇ ವೇಳೆ ಉಮ್ಮನ್ ಚಾಂಡಿ ಯಾವುದೇ ಸ್ಥಾನದಿಂದ ಸ್ಪರ್ಧಿಸಿದರೂ ಯುಡಿಎಫ್ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.