ಮಂಜೇಶ್ವರ: ಲಕ್ಕಿ ಬ್ರದರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಬಂಗ್ರಮಂಜೇಶ್ವರ ಇದರ ವತಿಯಿಂದ 72 ನೇ ವರ್ಷದ ಗಣರಾಜ್ಯೋತ್ಸವವನ್ನ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಪರಿಸರದಲ್ಲಿ ಆಚರಿಸಿದರು.
ಸಂಸ್ಥೆಯ ಅಧ್ಯಕ್ಷ ಬಹುಭಾಷಾ ಗಾಯಕ ಸಿದ್ದಿಕ್ ಮಂಜೇಶ್ವ ಧ್ವಜಾರೋಹಣಗೈದರು. ದಾರುಸಲಾಮ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಇಬ್ಬು ಯೂಸಫ್ ಗಣರಾಜ್ಯೋತ್ಸವದ ಶುಭ ಸಂದೇಶ ನುಡಿದರು. ಈ ವೇಳೆ ಸಂಸ್ಥೆಯ ಚ್ಯಾರಿಟಿ ಕನ್ವಿನರ್ ಆಸೀಸ್, ಸಂಸ್ಥೆಯ ಜೊತೆ ಕಾರ್ಯದರ್ಶಿ ಮೊಯಿದ್ದೀನ್ ಪಿ.ಕೆ, ಉಪಾಧ್ಯಕ್ಷ ಕೆಬೀರ್, ಸಂಶೀರ್, ಖಾದರ್, ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸಂಶೀರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ವಂದಿಸಿದರು. ಜನಗಣಮನ ಹಾಡಿ, ಸಿಹಿತಿಂಡಿ ಹಂಚಲಾಯಿತು.
ಇಂದು ಮಧ್ಯಾಹ್ನ ಬಳಿಕ ಸಾರ್ವಜನಿಕರಿಗಾಗಿ ರಸಪ್ರಶ್ನೆ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಲಿದೆ. ಸತತವಾಗಿ ಕಳೆದ 20 ವರುಷಗಳಿಂದಲೂ ಕೂಡಾ ಗಣರಾಜ್ಯೋತ್ಸವ ದಿನ ಧ್ವಜಾರೋಹಣ ಕಾರ್ಯಕ್ರಮ ನಡೆಸುವುದರೊಂದಿಗೆ ಸಾರ್ವಜನಿಕರಿಗೆ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಲಕ್ಕಿ ಬ್ರದರ್ಸ್ ಸಾಮಾಜಿಕ ರಂಗದಲ್ಲಿ ಸರ್ವ ಧರ್ಮ ಸಮನ್ವಯದಂತೆ ಮಂಜೇಶ್ವರದ ಆಶಾಕಿರಣವಾಗಿದ್ದು, ಈ ಬಾರಿ 25 ನೇ ವರುಷದ ರಜತ ಮಹೋತ್ಸವದ ಸಂಭ್ರಮದಲ್ಲಿದ್ದೆ.