ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಅನನ್ಯ ಪೆರ್ಮುಖ ಶೇ.84 ಅಂಕಗಳೊಂದಿಗೆ ಡಿಸ್ಟಿಂಕ್ಶನ್‍ನಲ್ಲಿ ತೇರ್ಗಡೆಯಾಗಿರುತ್ತಾಳೆ. ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯ ವಿದ್ಯಾರ್ಥಿನಿಯಾಗಿದ್ದು, ನಿವೃತ್ತ ವಾಯು ಸೈನಿಕ ಪೆರ್ಮುಖ ಶ್ರೀಹರಿಪ್ರಸಾದ್ ಭಟ್ - ರಶ್ಮಿ ಇವರ ಪುತ್ರಿ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿನಿ.