ಹೈದರಾಬಾದ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಗುರುವಾರ ಒಡಿಶಾ ಕರಾವಳಿಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ(ಎಚ್‌ಎಎಲ್) ಹಾಕ್-ಐನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ಮಾರ್ಟ್ ಆಂಟಿ-ಏರ್ಫೀಲ್ಡ್ ವೆಪನ್ (ಎಸ್‌ಎಎಡಬ್ಲ್ಯು) ವಿಮಾನದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಸ್ಮಾರ್ಟ್ ಶಸ್ತ್ರಾಸ್ತ್ರವನ್ನು ಎಚ್‌ಎಎಲ್‌ನ ಇಂಡಿಯನ್ ಹಾಕ್-ಎಂಕೆ 132 ನಿಂದ ಯಶಸ್ವಿ ಪರೀಕ್ಷಾ ಹಾರಾಟ ನಡೆಸಲಾಯಿತು ಎಂದು ಡಿಆರ್‌ಡಿಒ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಡಿಆರ್‌ಡಿಒ ನಡೆಸಿದ ಎಸ್‌ಎಎಡಬ್ಲ್ಯೂನ 9ನೇ ಯಶಸ್ವಿ ಕಾರ್ಯಾಚರಣೆಯಾಗಿದೆ. ಬಾಲಸೋರ್‌ನ ಮಧ್ಯಂತರ ಪರೀಕ್ಷಾ ಶ್ರೇಣಿ(ಐಟಿಆರ್) ನಲ್ಲಿ ಸ್ಥಾಪಿಸಲಾದ ಟೆಲಿಮೆಟ್ರಿ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳು ಎಲ್ಲಾ ಮಿಷನ್ ನ ಚಟುವಟಿಕೆಗಳನ್ನು ಸೆರೆಹಿಡಿದವು.
ಎಸ್‌ಎಎಡಬ್ಲ್ಯು ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಡಿಆರ್‌ಡಿಒ ಸಂಶೋಧನಾ ಕೇಂದ್ರ ಇಮರತ್ (ಆರ್‌ಸಿಐ) ಹೈದರಾಬಾದ್ ಅಭಿವೃದ್ಧಿಪಡಿಸಿದೆ.
ಇದು 125ಕೆಜಿ ಕ್ಲಾಸ್ ಸ್ಮಾರ್ಟ್ ಆಯುಧವಾಗಿದ್ದು, ನೆಲದ ಶತ್ರು ವಾಯುನೆಲೆಯ ಸ್ವತ್ತುಗಳಾದ ರಡಾರ್, ಬಂಕರ್, ಟ್ಯಾಕ್ಸಿ ಟ್ರ್ಯಾಕ್ ಮತ್ತು 100 ಕಿ.ಮೀ ವ್ಯಾಪ್ತಿಯ ಮಾರ್ಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಶಸ್ತ್ರಾಸ್ತ್ರವನ್ನು ಈ ಹಿಂದೆ ಜಾಗ್ವಾರ್ ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ (ಡಿಡಿಆರ್ ಮತ್ತು ಡಿ) ಕಾರ್ಯದರ್ಶಿ ಮತ್ತು (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಅವರು ಯಶಸ್ವಿ ಪ್ರಯೋಗದಲ್ಲಿ ಭಾಗಿಯಾಗಿರುವ ತಂಡಗಳನ್ನು ಅಭಿನಂದಿಸಿದ್ದಾರೆ.