ನವದೆಹಲಿ: ಮುಂದಿನ ಒಂದೂವರೆ ವರ್ಷಗಳ ಕಾಲ ಕೃಷಿ ಕಾನೂನುಗಳ ಅಮಾನತುಪಡಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ್ದಾರೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.
ಕೃಷಿ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ನಿನ್ನೆ ನಡೆಸಿದ 10ನೇ ಸುತ್ತಿನ ಮಾತುಕತೆ ಸಂದರ್ಭದಲ್ಲಿ ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದಿನ ಒಂದೂವರೆ ವರ್ಷಗಳ ಕಾಲ ಮುಂದೂಡುವ ಪ್ರಸ್ತಾವ ಮಾಡಿತ್ತು. ರೈತರು ಕೂಡಲೇ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೃಹತ್ ಟ್ರಾಕ್ಟರ್ ಮೆರವಣಿಯ ಯೋಜನೆಯಿಂದ ಸರ್ಕಾರ ಎದೆಗುಂದಬೇಕಾಗಿಲ್ಲ ಎಂದು ಅನೇಕ ರೈತರು ಹೇಳಿದ್ದಾರೆ.