ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ಕಾರ್ಯ ಪ್ರಗತಿಯಲ್ಲಿದ್ದು ಈ ನಿಟ್ಟಿನಲ್ಲಿ ಅವಲೋಕನ ಸಭೆ ಇತ್ತೀಚೆಗೆ ಸಿರಿಬಾಗಿಲಿನಲ್ಲಿ ಜರಗಿತು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ಸಭೆಗೆ ಭವನ ನಿರ್ಮಾಣ ಕಾಮಗಾರಿಯ ಪ್ರಗತಿ ಮಾಹಿತಿ ನೀಡಿದರು. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ಆರ್ಥಿಕವಾಗಿ ನಾಡಿನ ದೇಶವಿದೇಶಗಳ ಯಕ್ಷಗಾನ ಅಭಿಮಾನಿಗಳು ಕಲಾಸೇವಕರು ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.
ಸಭೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣ ಯೋಜನೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳಾಗಿರುವ ಲಕ್ಷ್ಮೀನಾರಾಯಣ ಕಾವು ಮಠ, ಯೋಗೀಶ ರಾವ್ ಚಿಗುರುಪಾದೆ, ರಾಜಾರಾಮ ರಾವ್ ಮೀಯಪದವು, ಸತೀಶ ಅಡಪ ಸಂಕಬೈಲು, ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಜಯರಾಮ ಕಾರಂತ ದೇಶಮಂಗಲ, ತಿಮ್ಮಪ್ಪ ಮಜಲು, ವಿಷ್ಣು ಶ್ಯಾನುಭೋಗ್ ಕೂಡ್ಲು, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಜಯರಾಮ ರೈ ಸಿರಿಬಾಗಿಲು, ಸುಮನ್ ರಾಜ್ ನೀಲಂಗಳ, ರಾಧಾಕೃಷ್ಣ ಭಟ್ ಕೊಂಗೊಟ್ಟು, ಸುಮಿತ್ರಾ ಆರ್ ಮಯ್ಯ, ಯಸ್ ಯನ್ ರಾಮ ಶೆಟ್ಟಿ, ಸದಾಶಿವ ಭಟ್ ಎದುರ್ಕಳ, ವೆಂಕಟರಮಣ ಹೊಳ್ಳ ಸಿರಿಬಾಗಿಲು, ಉಮಾ ಭಟ್ ಕೋಂಗೋಟ್ಟು ಮೊದಲಾದ ಗಣ್ಯರು ಭಾಗವಹಿಸಿದ್ದರು.