ಕೊಚ್ಚಿ: ವಿವಾದಿತ ಹೋರಾಟಗಾರೆ ರೆಹೆನಾ ಫಾತಿಮಾಳೊಂದಿಗಿನ ಸಂಬಂಧವನ್ನು ಮೊಟಕುಗೊಳಿಸಿ ವಿಚ್ಚೇದನಗೈಯ್ಯಲು ತೀರ್ಮಾನಿಸಿರುವುದಾಗಿ ಪತಿ ಮನೋಜ್ ಕೆ.ಶ್ರೀಧರ್ ಹೇಳಿಕೊಂಡಿದ್ದಾರೆ. ತನ್ನ ಜೀವನ ಸಂಗಾತಿಯಾದ ರೆಹೆನಾಳಿಗೆ ವಿಚ್ಚೇದನ ನೀಡುವುದಾಗಿ ಮನೋಜ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಲಿವಿಂಗ್ ಟುಗೆದರ್ ಎಂಬ ಪರಿಕಲ್ಪನೆಯಲ್ಲಿ ಜೀವನವನ್ನು ಪ್ರಾರಂಭಿಸಿದ ನಾವು ಕ್ರಮೇಣ ಪತಿ-ಪತ್ನಿಯರಾಗಿ ನಮ್ಮ ಸಂಬಂಧ ಬೆಳೆದುಬಂತೆಂದು ಮನೋಜ್ ಹೇಳಿರುವರು.
ನಾವಿಬ್ಬರೂ ಒಟ್ಟಿಗೆ ಇರುವ ಕುಟುಂಬ ಸನ್ನಿವೇಶದಲ್ಲಿ ಮಕ್ಕಳಿಗೆ ಪೋಷಕರಾದೆವು. ಈ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವಾಗ, ನಾವು ನಮ್ಮ ವೈಯಕ್ತಿಕ ಜೀವನವನ್ನು ಬದಲಾಯಿಸಬೇಕಾಗಿತ್ತು. ಪ್ರತಿಯೊಬ್ಬರೂ ತಮಗಾಗಿ ಮಾತ್ರ ಬದುಕಬೇಕಾದ ಜೀವನದಲ್ಲಿ ಒಂದು ಹಂತವಿದೆ. ಮಾನವರು ಅದನ್ನು ತಮ್ಮ ಜೀವನದ ಒಂದು ಹಂತದಲ್ಲಿ ಗುರುತಿಸುತ್ತಾರೆ ಮತ್ತು ತಮಗೆ ನ್ಯಾಯ ಒದಗಿಸುತ್ತಾರೆ. ಸಂತೋಷದಿಂದಿರುವ ಪೋಷಕರು ಮಾತ್ರ ತಮ್ಮ ಮಕ್ಕಳಿಗೆ ನ್ಯಾಯ ನೀಡಬಲ್ಲರು 'ಎಂದು ಮನೋಜ್ ಕೆ ಶ್ರೀಧರ್ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.
ಒಬ್ಬರನ್ನೊಬ್ಬರು ಸ್ವತಂತ್ರ ವ್ಯಕ್ತಿಗಳಾಗಿ ನೋಡುವುದಕ್ಕೆ ಮಿತಿಗಳಿದ್ದವು. ಇಬ್ಬರು ಒಟ್ಟಿಗೆ ವಾಸಿಸಲು ನಿರ್ಧರಿಸಿದಂತೆಯೇ, ಗೌರವದಿಂದ ಪ್ರತ್ಯೇಕವಾಗಿರಲೂ ಸಾಧ್ಯವಾಗುತ್ತದೆ ಎಂದು ಮನೋಜ್ ಹೇಳುತ್ತಾರೆ. ಮಕ್ಕಳ ವ್ಯವಹಾರಗಳು ಸೇರಿದಂತೆ ಸಾಮೂಹಿಕ ಜವಾಬ್ದಾರಿ ಒಟ್ಟಾಗಿ ಮುಂದುವರಿಯುವುದು ಎಂದರು.
ಸಂಬಂಧವು ಕೊನೆಗೊಳ್ಳಲಿದ್ದು ನಮ್ಮಿಬ್ಬರ ಪಾಲುದಾರಿಕೆ ಒಡೆಯುತ್ತಿದೆ. ಪರಸ್ಪರ ಶಕ್ತಿಗಳು ಕಣ್ಮರೆಯಾಗುತ್ತಿವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಮನೋಜ್ ಹೇಳಿದರು. 'ನಾವು ದಂಪತಿಗಳ ಚೌಕಟ್ಟಿನಿಂದ ಹೊರಬಂದು ಪರಸ್ಪರ ಸ್ವತಂತ್ರ ವ್ಯಕ್ತಿಗಳಾಗಿ ಗುರುತಿಸಿಕೊಂಡು ಪ್ರತ್ಯೇಕವಾಗಿರುತ್ತೇವೆ ಎಂದು ಹೇಳುವ ಮೂಲಕ ಫೇಸ್‍ಬುಕ್ ಪೆÇೀಸ್ಟ್ ಕೊನೆಗೊಳ್ಳುತ್ತದೆ.