ನವದೆಹಲಿ: ಇತ್ತೀಚೆಗೆ ಲೋನ್ ನೀಡುವ ಆಪ್ ಗಳು ಸುದ್ದಿಯಾಗಿತ್ತು. ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದ ಈ ಲೋನ್ ನೀಡುವ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್ ಮಾಹಿತಿ ನೀಡಿದೆ.
ವೈಯಕ್ತಿಕ ಸಾಲ ನೀಡುವ ನೂರಾರು ಲೋನ್ ಆಪ್ ಗಳನ್ನು ರಿವ್ಯೂ ಮಾಡಿರುವುದಾಗಿ ಟೆಕ್ ದೈತ್ಯ ಗೂಗಲ್ ಹೇಳಿದೆ.
ಸರ್ಕಾರಿ ಏಜೆನ್ಸಿಗಳು ಹಾಗೂ ಬಳಕೆದಾರರು ಗುರುತಿಸಿದ್ದ, ಗೂಗಲ್ ನೀತಿ ಹಾಗೂ ಬಳಕೆಗೆ ವಿರುದ್ಧವಾಗಿದ್ದ ಆಪ್ ಗಳನ್ನು ತೆಗೆದುಹಾಕಲಾಗಿದೆ.
ಗೂಗಲ್ ಉತ್ಪನ್ನಗಳಲ್ಲಿ ಸುಭದ್ರ ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸುವುದು ಆದ್ಯತೆಯಾಗಿದೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್ ತನ್ನ ಬ್ಲಾಗ್ ಸ್ಪಾಟ್ ನಲ್ಲಿ ತಿಳಿಸಿದೆ.
ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿರುವ ಆಪ್ ಗಳ ವಿವರಗಳನ್ನು ಗೂಗಲ್ ನೀಡಿಲ್ಲ.