ತಿರುವನಂತಪುರ: ಕೋವಿಡ್‌ನಿಂದಾಗಿ ಮುಚ್ಚಲ್ಪಟ್ಟಿದ್ದ ಆಯುರ್ವೇದ ರೆಸಾರ್ಟ್ ಮತ್ತು 'ಸ್ಪಾ'ಗಳನ್ನು ತೆರೆಯಲು ಕೇರಳ ಸರ್ಕಾರ ಅನುಮತಿ ನೀಡಿದೆ.
'ಕೋವಿಡ್ ಮಾರ್ಗಸೂಚಿಗಳ ಅನುಸಾರವಾಗಿ 'ಸ್ಪಾ' ಮತ್ತು ಆಯುರ್ವೇದ ರೆಸಾರ್ಟ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈ ವೇಳೆ ಅವರು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದರು.
ಕೇರಳದಲ್ಲಿ ಆಯುರ್ವೇದ ರೆಸಾರ್ಟ್ ಮತ್ತು 'ಸ್ಪಾ'ಗಳಿಗೆ ದೇಶಿಯ ಮತ್ತು ವಿದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು.
ದೇಶದ ಮೊದಲ ಕೊರೊನಾ ವೈರಸ್ ಕೇರಳದಲ್ಲಿ ವರದಿಯಾಗಿತ್ತು. ಬಳಿಕ ಕೇರಳ ಸರ್ಕಾರವು ಕಾಲ ಕ್ರಮೇಣ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ತಂದಿತ್ತು. ಆದರೆ ಇತ್ತೀಚೆಗೆ ಮತ್ತೆ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕೇರಳದಲ್ಲಿ ಶುಕ್ರವಾರ ಒಟ್ಟು 5,142 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಹೊಸದಾಗಿ 23 ಮಂದಿ ಮೃತಟ್ಟಿದ್ದಾರೆ. ಇಲ್ಲಿ ಈವರೆಗೆ 8,01,075 ಪ್ರಕರಣಗಳು ವರದಿಯಾಗಿವೆ.