ಕೊಟ್ಟಾಯಂ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ರಾಜ್ಯ ಎನ್.ಸಿ.ಪಿಯಲ್ಲಿ ಸಮಸ್ಯೆಗಳು ಉದ್ಬವಿಸಿದೆ. ಪಾಲಾ ವಿಧಾನಸಭಾ ಸ್ಥಾನಕ್ಕಾಗಿ ವಿವಾದ ಮುಂದುವರೆದಂತೆ, ಸಚಿವ ಎ.ಕೆ.ಶಶೀಂದ್ರನ್ ವಿರುದ್ದ ಪಕ್ಷದ ಬಣಗಳು ಕ್ರಮಕ್ಕೆ ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ. ಶಶೀಂದ್ರನ್ ಅವರು ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಉದ್ದೇಶದಿಂದ ಎನ್.ಸಿ.ಪಿ ಮುಂದಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಿಪಿಎಂ ನಾಯಕತ್ವಕ್ಕೆ ಹತ್ತಿರವಿರುವ ಶಶೀಂದ್ರನ್ ಅವರನ್ನು ಕಣಕ್ಕಿಳಿಸುವ ಪ್ರಯತ್ನಗಳು ಪಕ್ಷದ ಒಂದು ಬಣದಲ್ಲಿ ಪ್ರಬಲವಾಗಿವೆ.
ಶಶಿಂದ್ರನ್ ವಿರುದ್ಧದ ಅಪಸ್ವರವು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿಗೆ ಕೋಝಿಕೋಡ್ ಜಿಲ್ಲೆಯಿಂದ ಪ್ರಾರಂಭವಾಯಿತು. ರಾಜ್ಯ ಎನ್.ಸಿ.ಪಿಯ ಒಂದು ವಿಭಾಗವು ಶಶೀಂದ್ರನ್ ಅವರನ್ನು ಏಳತ್ತೂರು ಕ್ಷೇತ್ರದಿಂದ ಬದಲಾಯಿಸಬೇಕೆಂದು ಒತ್ತಾಯಿಸಿದೆ. ಏಳತ್ತೂರು ಸೇರಿದಂತೆ ಇತರೆಡೆಗಳಲ್ಲಿ ಏಳು ಬಾರಿ ಸ್ಪರ್ಧಿಸಿರುವ ಶಶೀಂದ್ರನ್ ಐದು ಬಾರಿ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಶಶೀಂದ್ರನ್ ಅವರ ಬದಲಿಗೆ ಹೊಸ ಅಭ್ಯರ್ಥಿಯನ್ನು ಸ್ಥಾನಕ್ಕೆ ತರಲು ಪ್ರತಿ ಬಣ ಬಯಸುತ್ತವೆ.
ಹೊಸಬರಿಗೆ ಅವಕಾಶ ನೀಡುವ ಅವಶ್ಯಕತೆ:
ಏಳು ಬಾರಿ ಸ್ಪರ್ಧಿಸಿ ಎರಡು ಬಾರಿ ಸಚಿವರಾಗಿರುವ ಶಶೀಂದ್ರನ್ ಈ ಬಾರಿ ಪಕ್ಕಕ್ಕೆ ನಿಲ್ಲುವಂತೆ ಒಂದು ವಿಭಾಗದಿಂದ ತೀವ್ರ ಬೇಡಿಕೆ ಕೇಳಿಬಂದಿದೆ. ಎನ್.ಸಿ.ಪಿಯ ಸಿಟ್ಟಿಂಗ್ ಸ್ಥಾನವಾದ ಏಳತ್ತೂರು ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ಹೊಸಬರು ಅಥವಾ ಯುವಕರು ಬೇಕಾಗಿದ್ದಾರೆ. ಆದರೆ ಶಶೀಂದ್ರನ್ ಅವರು ಯಾರನ್ನು ಕಣಕ್ಕಿಳಿಸುವರೆಂದು ಇನ್ನೂ ಪ್ರತಿಕ್ರಿಯಿಸಿಲ್ಲ. ಪಾಲಾ ಸ್ಥಾನಕ್ಕೆ ಸಂಬಂಧಿಸಿದಂತೆ ಶಶೀಂದ್ರನ್ ವಿರುದ್ಧ ಬಣವೊಂದು ಬೇಡಿಕೆ ಇಟ್ಟಿದೆ ಎಂದು ವರದಿಯಾಗಿದೆ.
ಸಿಪಿಎಂಗೆ ಶಶೀಂದ್ರನ್ ಬಗ್ಗೆ ಏನು ಅಭಿಪ್ರಾಯ:
ವಿವಾದದ ಹೊರತಾಗಿಯೂ, ಶಶೀಂದ್ರನ್ ಅವರು ಏಳತ್ತೂರಲ್ಲಿ ಸ್ಪರ್ಧಿಸಬೇಕೆಂದು ಸಿಪಿಎಂ ಬಯಸಿದೆ. ಎಡ-ಪ್ರಭಾವಿತ ಕ್ಷೇತ್ರದಲ್ಲಿ ಶಶಿಂದ್ರನನ್ನು ತಮ್ಮದೇ ಆದ ಚಿಹ್ನೆಯಡಿಯಲ್ಲಿ ಕಣಕ್ಕಿಳಿಸುವ ಯೋಜನೆಯೂ ಇದೆ. ಇದೇ ವೇಳೆ ಸಿಪಿಎಂ ನಾಯಕತ್ವವು ಏಳತ್ತೂರು ನ್ನು ಎನ್‍ಸಿಪಿಯಿಂದ ಸ್ವಾಧೀನಪಡಿಸಿಕೊಳ್ಳಲು ಮತ್ತು ಅವರಿಗೆ ಆ ಸ್ಥಾನದ ಬದಲಿಗೆ ಕುಂದಮಂಗಲಂ ನೀಡಲು ಯೋಜಿಸುತ್ತಿದೆ. ಆದರೆ ಈ ವಿಷಯದಲ್ಲಿ ಯಾವುದೇ ಅಧಿಕೃತ ದೃಢೀಕರಣ ಕಂಡುಬಂದಿಲ್ಲ.
ಶಶೀಂದ್ರನ್ ವಿರುದ್ಧ ಮಾಣಿ ಕಾಪ್ಪನ್ ಬಣ?
ಶಶೀಂದ್ರನ್ ವಿರುದ್ಧ ಎನ್.ಸಿ.ಪಿಯಲ್ಲಿ ಮಾಣಿ ಸಿ. ಕಾಪ್ಪನ್ ಬಣ ರಾಜಕೀಯ ನಡೆಸುತ್ತಿದ್ದಾರೆ ಎಂಬ ಸೂಚನೆಗಳಿವೆ. ಪಾಲಾ ಸ್ಥಾನವನ್ನು ಜೋಸ್ ಕೆ.ಮಾಣಿಗೆ ಹಸ್ತಾಂತರಿಸಬೇಕು ಎಂಬುದು ಶಶೀಂದ್ರನ್ ಅವರ ಅಭಿಪ್ರಾಯ. ಆದರೆ ಮಾಣಿ ಸಿ ಕಾಪ್ಪನ್ ಅವರು ಪಾಲಾ ಸ್ಥಾನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಪಡುತ್ತಾರೆ. ಮಾಣಿ ಸಿ ಕಾಪ್ಪನ್ ಗೆ ಪಾಲಾ ಬದಲಿಗೆ ಕುಟ್ಟನಾಡ್ ಸ್ಥಾನ ನೀಡುವುದಾಗಿ ಶಶೀಂದ್ರನ್ ಬಣ ಭರವಸೆ ನೀಡಿದೆ. ಈ ಬಗ್ಗೆ ಸಚಿವರು ಮಾಣಿ ಸಿ ಕಾಪ್ಪನ್ ಅವರೊಂದಿಗೆ ನೇರವಾಗಿ ಮಾತನಾಡಿದ್ದರು. ಯಾವುದೇ ಸಂದರ್ಭದಲ್ಲೂ ಪಾಲ ಸ್ಥಾನವನ್ನು ನೀಡದಿದ್ದಲ್ಲಿ ಕುಟ್ಟನಾಡ್ ಸ್ಥಾನ ನೀಡಲಾಗುವುದು ಎಂದು ಶಶೀಂದ್ರನ್ ಮಾಣಿ ಸಿ ಕಾಪ್ಪನ್ ಗೆ ಮಾಹಿತಿ ನೀಡಿರುವರು. ಆದರೆ ಮಾಣಿ ಸಿ ಕಾಪ್ಪನ್ ಅವರು ಈ ಒಡಂಬಡಿಕೆಗೆ ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಮಾಣಿ ಸಿ ಕಾಪ್ಪನ್ ಅವರು ಪಕ್ಷ ಬದಲಾವಣೆ ಸೇರಿದಂತೆ ಬೇಡಿಕೆಗಳ ಬಗ್ಗೆ ರಾಷ್ಟ್ರೀಯ ನಾಯಕತ್ವಕ್ಕೆ ಮಾಹಿತಿ ನೀಡಿರುವರು.