ತಿರುವನಂತಪುರ: ಪಲ್ಸ್ ಪೋಲಿಯೊ ಔಷಧ ವಿತರಣೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಕಂಟೋನ್ಮೆಂಟ್ ವಲಯದಲ್ಲಿ ಯಾವುದೇ ಪಲ್ಸ್ ಪೋಲಿಯೊ ಔಷಧಿಯನ್ನು ವಿತರಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ಪಾಸಿಟಿವ್ ಆಗಿರುವ ಮಗುವಿಗೆ ನೆಗೆಟಿವ್ ಆಗಿ ನಾಲ್ಕು ವಾರಗಳ ಬಳಿಕ ಲಸಿಕೆ ನೀಡಬಹುದೆಂದು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ಕೋವಿಡ್ ನಿರೀಕ್ಷಣೆಯಲ್ಲಿರುವ ಕುಟುಂಬದ ಮಗುವಿಗೆ ನಿರೀಕ್ಷಣಾ ಅವಧಿ ಮುಗಿದ ಬಳಿಕ ಮಾತ್ರ ಪೋಲೀಯೋ ಲಸಿಕೆ ನೀಡಿದರೆ ಸಾಕಾಗುವುದು. ಕೋವಿಡ್ ಸೋಂಕಿತರಿರುವ ಮನೆಗಳ ಮಕ್ಕಳಿಗೆ ಪರೀಕ್ಷೆ ನೆಗೆಟಿವ್ ಆಗಿ 14 ದಿನಗಳ ಬಳಿಕ ಲಸಿಕೆ ನೀಡಬಹುದೆಂದು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.