ಕಾಸರಗೋಡು: ಮಹಾತ್ಮಾಗಾಂಧಿ ರಕ್ತಸಾಕ್ಷಿ ದಿನದಂದು ಕೆಪಿಸಿಸಿ ನೂರನೇ ವಾರ್ಷಿಕೋತ್ಸವ ಅಂಗವಾಗಿ ಕಾಸರಗೋಡು ಕಾಂಗ್ರೆಸ್ ಮಂಡಲ ಸಮಿತಿ ವತಿಯಿಂದ ಆಯೋಜಿಸಲಾದ ಗಾಂಧೀಜಿ ಸ್ಮøತಿ ಯಾತ್ರೆ ಶನಿವಾರ ಆರಂಭಗೊಂಡಿತು.
ಡಿಸಿಸಿ ಕಚೇರಿ ಸನಿಹ ನಡೆದ ಸಮಾರಂಭದಲ್ಲಿ ಜಾಥಾ ಮುಖಂಡ ಉಮೇಶ್ ಅಣಂಗೂರು ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ರತಿಕುಮಾರ್ ಉದ್ಘಾಟಿಸಿದರು. ಮುಖಂಡರಾದ ಸಿ.ಜಿ ಟೋನಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಗೋವಿಂದನ್ ನಾಯರ್, ಅರ್ಜುನನ್ ತಾಯಲಂಗಾಡಿ, ಕೆ.ಪಿ ದಾಮೋದರನ್ ಮುಂತಾದವರು ಉಪಸ್ಥಿತರಿದ್ದರು.