ಕಾಸರಗೋಡು: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗೆಗೆ ಸದಾ ನಿಗಾ ವಹಿಸಬೇಕು. ರೋಟರಿ ಕ್ಲಬ್ ಈ ನಿಟ್ಟಿನಲ್ಲಿ ಸರ್ವರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಡಾ ಹರಿಕೃಷ್ಣ ನಂಬ್ಯಾರ್ ತಿಳಿಸಿದರು.
ಅವರು ಕಣ್ಣೂರು ವಿಶ್ವವಿದ್ಯಾಲಯದ ಚಾಲದಲ್ಲಿರುವ ಕಾಸರಗೋಡು ಕ್ಯಾಂಪಸ್ ನಲ್ಲಿ ರೋಟರಿ ಕ್ಲಬ್ ಪ್ರಾಯೋಜಿತ ಆರೋಗ್ಯ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಡಾ ಜನಾರ್ಧನ್ ನಾಯ್ಕ್ ರಕ್ತದೊತ್ತಡ ಮತ್ತು ಡಯಾಬಿಟಿಸ್ ರೋಗಗಳನ್ನು ಯಾರೂ ಕೂಡಾ ನಿರ್ಲಕ್ಷ್ಯ ಮಾಡಬಾರದು. ಇದು ಅತೀ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಆಹಾರ ಸೇವನೆ ಮತ್ತು ಸ್ವಯಂ ಜಾಗೃತಿ ಅತೀ ಅಗತ್ಯವಿದೆ ಎಂದರು.
ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಡಾ ರಾಜಾರಾಮ್ ಕೆ ಮುಖ್ಯ ಅತಿಥಿಯಾಗಿದ್ದರು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಾಸರಗೋಡು ಅಧ್ಯಕ್ಷ, ರೋಟರಿ ಸದಸ್ಯ ಡಾ ನಾರಾಯಣ ನಾಯ್ಕ್ ಮತ್ತು ಸಹಾಯಕ ಗವರ್ನರ್ ದಿನಕರ್ ರೈ ಶುಭಾಶಂಸನೆ ಗೈದರು. ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸ್ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ವಿಭಾಗ ನಿರ್ದೇಶಕ ಡಾ. ರಿಜುಮೋಲ್ ಕೆ.ಸಿ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ವಂದಿಸಿದರು. ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು.