ಉಪ್ಪಳ: ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಪ್ರಯುಕ್ತ ಪೈವಳಿಕೆ ಬಾಯಾರು ಸಮೀಪದ ಸಜಂಕಿಲದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ನಾಯ್ಕ್ ಗುಂಪೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಹಾಗು ಅಧ್ಯಾಪಕ ಶ್ರೀರಾಮ ಮಾಸ್ತರ್ ಅವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಯುವಮೋರ್ಚ ಪೈವಳಿಕೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಆವಳ, ಗಣೇಶ್ ಭಟ್, ದಿನೇಶ್ ದೈತೋಟ ಉಪಸ್ಥಿತರಿದ್ದರು.