ಬದಿಯಡ್ಕ: ಪೆರ್ಲದ ಸವಿ ಹೃದಯದ ಕವಿ ಮಿತ್ರರು ಸಾಹಿತ್ಯ-ಸಾಂಸ್ಕøತಿಕ ಸಂಘಟನೆಯ ನೇತೃತ್ವದಲ್ಲಿ ನಾಳೆ (ಭಾನುವಾರ) ಈಶ್ವರಮಂಗಲ ಸಮೀಪದ ಹನುಮಗಿರಿಯಲ್ಲಿ ಸವಿಹೃದಯದ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ನಿವೃತ್ತ ಶಿಕ್ಷಕ ಕೆ.ಸಿ.ಪಾಟಾಳಿ ಪಡುಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಹನುಮಗಿರಿಯ ಪಂಚಮುಖಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ನನ್ಯ ಅಚ್ಚಯುತ್ತ ಮೂಡಿತ್ತಾಯ ಅವರು ಉದ್ಘಾಟಿಸುವರು. ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದ ಬಳಿಕ ಸಾಹಿತಿ, ಸಂಘಟಕ ಮಧುರಕಾನನ ಗಣಪತಿ ಭಟ್ ಅವರು ಸಂಪಾದಿಸಿರುವ ಸವಿಜೇನು ಕವನ ಸಂಕಲನದ ಪುಸ್ತಕ ವಿಮರ್ಶೆ ನಡೆಯಲಿದ್ದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಸಾಹಿತಿ ಸಾನು ಉಬರಡ್ಕ ಪುಸ್ತಕ ವಿಮರ್ಶೆ ನಡೆಸುವರು. ಬಳಿಕ ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಗೋಪಾಲ ಭಟ್ ಚುಕ್ಕಿನಡ್ಕ ಅವರು ಬರೆದಿರುವ ಶ್ರೀಕೃಷ್ಣ ಚರಿತಾಮೃತ ಭಾಮಿನಿ ಷಷ್ಪದಿಯ ಗ್ರಂಥದ ಲೋಕಾರ್ಪಣೆ ನಡೆಯಲಿದೆ.
ಸಮಾರಂಭದ ಅಂತಿಮ ಘಟ್ಟದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಸಾಹಿತಿ ಅಶ್ವಿನಿ ಕೋಡಿಬೈಲು ಅಧ್ಯಕ್ಷತೆ ವಹಿಸುವರು. ದಕ್ಷಿಣ ಕನ್ನಡ-ಕಾಸರಗೋಡಿನ ಯುವ ಸಾಹಿತಿಗಳು ಭಾಗವಹಿಸುವರು. ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಖ್ಯಾತ ಕಾರ್ಟೂನಿಸ್ಟ್ ವೆಂಕಟ್ ಭಟ್ ಎಡನೀರು ಅವರ ವೈಂಗ್ಯಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.