ಬದಿಯಡ್ಕ: ಭಾರತೀಯ ಜನತಾ ಪಕ್ಷ ಮಲ್ಲಡ್ಕ ವಾರ್ಡ್ ಮಾನ್ಯ ಘಟಕದ ವತಿಯಿಂದ ವಿಶೇಷ ಜನಸಂಪರ್ಕ ಸಭೆಯು ಮಾನ್ಯ ವಿಷ್ಣುಮೂರ್ತಿ ನಗರ ಸಮೀಪದ ವಿನಯ ಕುಮಾರ್‍ರವರ ಮನೆಯಲ್ಲಿ ಮಂಗಳವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತಿ ಸಮಿತಿ ಅಧ್ಯಕ್ಷ, ಗ್ರಾಮ ಪಂಚಾಯತಿ ಸದಸ್ಯ ಶಂಕರ.ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್, ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಭಟ್, ಬದಿಯಡ್ಕ ಪಂಚಾಯತಿ ಸದಸ್ಯೆ ಸ್ವಪ್ನ.ಕೆ, ಬದಿಯಡ್ಕ ಪಂಚಾಯತಿ ಯೋಜನಾ ಸಮಿತಿಯ ಉಪಾಧ್ಯಕ್ಷ ಮಹೇಶ್ ಭಟ್ ವಳಕ್ಕುಂಜ ಉಪಸ್ಥಿತರಿದ್ದರು.
ವಾರ್ಡ್ ಸಮಿತಿ ಮೇಲ್ವಿಚಾರಕ ಬಾಲಕೃಷ್ಣ ಮಣಿಯಾಣಿ, ಹಿರಿಯ ಕಾರ್ಯಕರ್ತರಾದ ವಿನಯ ಕುಮಾರ್ ಎಂ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ "ಜನರೊಂದಿಗೆ ಜನಪ್ರತಿನಿಧಿ" ಎಂಬ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಪಡೆದು ಅದಕ್ಕೆ ಪರಿಹಾರ ಕಲ್ಪಿಸಲಾಯಿತು. ಕಾರ್ಯಕ್ರಮದ ಮೊದಲು ಒಂದು ಅಶಕ್ತ ಕುಟುಂಬದ ಮನೆಗೆ ತೆರಳಿ ದಿನಸಿ ಸಾಮಾನುಗಳನ್ನೊಳಗೊಂಡ ಕಿಟ್ ನ್ನು ಹಸ್ತಾಂತರಿಸಲಾಯಿತು. ಅಲ್ಲದೇ ಅಭಿವೃದ್ಧಿ ಹೊಂದಬೇಕಾಗಿರುವ ಕೆಲವು ಸ್ಥಳಗಳನ್ನು ಜಿಲ್ಲಾ ಪಂಚಾಯತಿ ಸದಸ್ಯರು, ಬ್ಲಾಕ್ ಪಂಚಾಯತಿ, ಗ್ರಾಮ ಪಂಚಾಯತಿ ಸದಸ್ಯರು, ಮುಂತಾದವರು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಚಂದ್ರೇಶ್ ಮಾನ್ಯ ಸ್ವಾಗತಿಸಿ ಮಧುಚಂದ್ರ ಮಾನ್ಯ ವಂದಿಸಿದರು. ಪ್ರಶಾಂತ್ ಮಾನ್ಯ ನಿರೂಪಿಸಿದರು.