ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ದೇಶದ ಪ್ರಪ್ರಥಮ ದೇಶೀಯ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಚಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣಗೊಳಿಸಿದರು.
ಬೆಂಗಳೂರಿನ ಬಿಇಎಂಎಲ್ ಉತ್ಪಾದನಾ ಕೇಂದ್ರದಲ್ಲಿ ಸಿಂಗ್ ಅವರು ಈ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನ್ನುಅನಾವರಣ ಮಾಡಿದ್ದಾರೆ.
ಬಿಇಎಂಎಲ್ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು , ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಎಂಜಿನಿಯರ್‍ಗಳು ಮತ್ತು ತಂತ್ರಜ್ಞರ ತಂಡವು ಮಾಡುತ್ತಿರುವ ಉತ್ತಮ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ."ಅವರು ಆತ್ಮನಿರ್ಭಾರ ಭಾರತದ ನಿಜವಾದ ಯೋಧರು, ಭಾರತವನ್ನು ಮುಂದಕ್ಕೆ ಕರೆದೊಯ್ಯುವವರಿದ್ದಾರೆ." ಎಂದು ಅವರು ಹೇಳಿದರು.
ಬಿಇಎಂಎಲ್ ಹೇಳಿಕೆಯಂತೆ ಕಂಪನಿಯ ಬೆಂಗಳೂರು ಕಾಂಪ್ಲೆಕ್ಸ್‍ನಲ್ಲಿ ತಯಾರಾಗುತ್ತಿರುವ ಅತ್ಯಾಧುನಿಕ ಚಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಗಳು ಸ್ಟೇನ್‍ಲೆಸ್-ಸ್ಟೀಲ್ ಹೊರಮೈನೊಂದಿಗೆ ಮಾಡಲ್ಪಟ್ಟಿದ್ದು, ಆರು ಕೋಚ್ ಗಳ ಮೆಟ್ರೋ ರೈಲು-ಸೆಟ್ ನಲ್ಲಿ 2280 ಪ್ರಯಾಣಿಕರನ್ನು ಸಾಗಿಸುವ ಸಾಮಥ್ರ್ಯ ಹೊಂದಿದೆ.
ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್‍ಮೆಂಟ್ ಅಥಾರಿಟಿ (ಎಂಎಂಆರ್‍ಡಿಎ) ಯ ಎಂಆರ್‍ಎಸ್ 1 ಯೋಜನೆಗಾಗಿ ಬಿಇಎಂಎಲ್ ಒಟ್ಟು 576 ಕೋಚ್ ಗಳನ್ನು ತಯಾರಿಸಲಿದ್ದು ಜನವರಿ 2024 ರವರೆಗೆ ಹಂತಹಂತವಾಗಿ ಇದನ್ನು ಸರಬರಾಜು ಮಾಡಲಾಗುತ್ತದೆ. ಡ್ರೈವರ್‍ಲೆಸ್ ಮೆಟ್ರೋ ಕೋಚ್ ಗಳ ಗಿ ಕಮಿಷನ್, ಟೆಸ್ಟಿಂಗ್ ಮತ್ತು ರೌಂಡ್-ದಿ-ಕ್ಲಾಕ್ ಸೇವೆಗಳನ್ನು ಪರಿಚಯಿಸಲು ಮುಂಬೈನ ಎಂಎಂಆರ್‍ಡಿಎ, ಚಾರ್ಕೋಪ್ ಮೆಟ್ರೋ ಡಿಪೆÇೀದಲ್ಲಿ ಬಿಇಎಂಎಲ್ ಇತ್ತೀಚೆಗೆ ತನ್ನ ಡಿಪೆÇೀ ಕಚೇರಿಯನ್ನು ತೆರೆಯಿತು.