HEALTH TIPS

ಕಣಿಪುರ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

         ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ಗುರುವಾರದಿಂದ ಆರಂಭಗೊಂಡಿತು. 

    ಸಂಪೂರ್ಣವಾಗಿ ಕೋವಿಡ್ ಮಾನದಂಡಗಳೊಂದಿಗೆ ಈಬಾರಿಯ ಉತ್ಸವವು ಎಲ್ಲಾ ವಿಧಿವಿಧಾನಗಳೊಂದಿಗೆ ಸಾಂಕೇತಿಕವಾಗಿ ನೆರವೇರಲಿದ್ದು ಗುರುವಾರ ಬೆಳಿಗ್ಗೆ 10.45ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿವರ್ಯರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬಳಿಕ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಉತ್ಸವ ಬಲಿ, ರಂಗಪೂಜೆ ನಡೆಯಿತು. 


     ಇಂದು(15/01)ಬೆಳಿಗ್ಗೆ 6.30 ರಿಂದ ಉತ್ಸವ ಶ್ರೀಭೂತಬಲಿ, ಬೆಳಿಗ್ಗೆ 10.30 ತುಳಾಭಾರ ಸೇವೆ, ಮಧ್ಯಾಹ್ನ 12.30 ಮಹಾಪೂಜೆ, ರಾತ್ರಿ 7 ರಿಂದ ಸಣ್ಣ ದೀಪೋತ್ಸವ, ಬಲಿ, ಪೂಜೆ ನಡೆಯಲಿದೆ. ಜ.16 ರಂದು ಬೆಳಿಗ್ಗೆ 6.30 ರಿಂದ ಉತ್ಸವ,ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 7 ರಿಂದ ನಡು ದೀಪೋತ್ಸವ, ದರ್ಶನಬಲಿ, ಪೂಜೆ ನಡೆಯಲಿದೆ. 


    ಜ.17 ರಂದು ಬೆಳಿಗ್ಗೆ 6.30 ರಿಂದ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಉತ್ಸವ, ಸಾಂಕೇತಿಕ ಬೆಡಿ ಸೇವೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ. ಜ.18 ರಂದು ಬೆಳಿಗ್ಗೆ 6.30 ರಿಂದ ಕವಾಟೋದ್ಘಾಟನೆ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅಪರಾಹ್ನ 3.30 ರಿಂದ ಅವಭೃತೋತ್ಸವ, ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯುವುದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. 


      ನಿಸ್ತೇಜ ಪೇಟೆ:

    ಪ್ರತಿವರ್ಷ ಕುಂಬಳೆ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯನ್ನು ವರ್ಣಾಲಂಕೃತಗೊಳಿಸಿ ಆಕರ್ಷಣೀಯಗೊಳಿಸುವುದು ವಾಡಿಕೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಯಾವ ಗೌಜುಗಳೂ ಕಂಡುಬಂದಿಲ್ಲ. ಜೊತೆಗೆ ಪೇಟೆಯ ಒಂದು ಪಾಶ್ರ್ವಪೂರ್ತಿ ತುಂಬಿರುತ್ತಿದ್ದ ಸಂತೆ ಈ ಬಾರಿ ಇಲ್ಲದಿರುವುದರಿಂದ ಜನಜಂಗುಳಿ ಇಲ್ಲದೆ ದೈನಂದಿನ ಸಾಮಾನ್ಯ ವಾತಾವರಣವಷ್ಟೇ ಇದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries