ಕಾಸರಗೋಡು: ಅದಾಲತ್ ಗಳಲ್ಲಿ ದೂರುಗಳ ಪರಿಶೀಲನೆ ವೇಳೆ ಬಹುತೇಕ ಬಾರಿ ಪ್ರತಿಕಕ್ಷಿಗಳು ಹಾಜರಾಗದೇ ಇರುವ ಕ್ರಮಗಳು ಕಮಡುಬರುತ್ತಿವೆ. ಇದರ ವಿರುದ್ಧ ಪ್ರಬಲ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮಹಿಳಾ ಆಯೋಗ ಸದಸ್ಯೆ ಷಾಹಿದಾ ಕಮಾಲ್ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಯೋಗದ ಮೆಗಾ ಅದಾಲತ್ ವೇಳೆ ಅವರು ಮಾತನಾಡಿದರು.
ಆಸ್ತಿ ತಗಾದೆಯೊಂದಕ್ಕೆ ಸಂಬಂಧಿಸಿ ಕುರುಡಪದವು ನಿವಾಸಿಯೊಬ್ಬರು 4 ಬಾರಿ ನೋಟೀಸು ನೀಡಿದ್ದರೂ ಹಾಜರಾಗದೇ ಇರುವ ಹಿನ್ನೆಲೆಯಲ್ಲಿ ಮುಂದಿನ ಅದಾಲತ್ ವೇಳೆ ಅವರನ್ನು ಹಾಜರುಪಡಿಸುವ ಹೊಣೆಯನ್ನು ಕಾಸರಗೋಡು ಡಿ.ವೈಎಸ್.ಪಿ.ಗೆ ನೀಡಲಾಗಿದೆ.
ಪೋಲೀಸರ ಸಹಾಯದೊಂದಿಗೆ ಉಭಯ ಕಕ್ಷಿಗಳನ್ನು ಕರೆಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಮಹಿಲಾ ಆಯೋಗ ಯತ್ನಿಸುತ್ತದೆ. ಇದೇ ವೇಳೆ ಪ್ರತಿಕಕ್ಷಿ ಹಾಜರಾಗದೇ ಇರುವುದನ್ನು ಗಂಭೀರವಾಗಿ ಕಾಣಲಾಗುತ್ತದೆ ಎಂದವರು ನುಡಿದರು.
ಮೆಗಾ ಅದಾಲತ್ ನಲ್ಲಿ ಒಟ್ಟು 47 ದೂರುಗಳ ಪರಿಶೀಲನೆ ನಡೆಸಲಾಗಿದ್ದು, 11 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ. 4 ದೂರುಗಳಲ್ಲಿ ಪೆÇಲೀಸ್ ಸಹಿತ ವಿವಿಧ ಇಲಾಖೆಗಳ ವರದಿ ಆಗ್ರಹಿಸಲಾಗಿದೆ. ಉಳಿದ 32 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಜಿಲ್ಲೆ, ಪಂಚಾಯತ್, ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರ , ಉಪಾಧ್ಯಕ್ಷರ, ನಗರಸಭೆಗಳ ಅಧ್ಯಕ್ಷರ, ಉಪಾಧ್ಯಕ್ಷರಿಗಾಗಿ ಮಹಿಳಾ ಆಯೋಗ, ಜಿಲ್ಲಾಡಳಿತ ಜಂಟಿ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಭೀತಿಯಲ್ಲದೆ ಸಮಾಜದಲ್ಲಿ ಬದುಕುವ ಹಿನ್ನೆಲೆ ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕವಾಗಲಿದೆ ಎಂದು ಆಯೋಗ ತಿಳಿಸಿದೆ.
ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಸಕ್ರಿಯವಾಗಿ ರಂಗಕ್ಕಿಳಿದರೆ ಸಮಸ್ಯೆಯೊಂದನ್ನು ಬುಡದಿಂದಲೇ ಬಗೆಹರಿಸಲು ಸಾಧ್ಯ ಎಂದು ಷಾಹಿದಾ ಕಮಾಲ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎಸ್.ಎನ್.ಸರಿತಾ, ಸಿ.ಐ. ಸಿ.ಭಾನುಮತಿ, ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಪಿ.ಶೈಲಾ, ಟಿ.ಆರ್.ರಮ್ಯತಾ, ಮಹಿಳಾ ಸಂರಕ್ಷಣೆ ವಿಭಾಗ ಕುಟುಂಬ ಕೌನ್ಸಿಲರ್ ರಮ್ಯಾ ಶ್ರೀನಿವಾಸನ್ ಉಪಸ್ಥಿತರಿದ್ದರು.