ಕೊಚ್ಚಿ: ವೈತಿಲಾ ಪ್ಲೈ ಓವರ್ ನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಉದ್ಘಾಟಿಸಿದರು. ಅದನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆಯು ಪೂರ್ಣಗೊಳ್ಳಲು ವಿವಿಧ ಬಿಕ್ಕಟ್ಟುಗಳನ್ನು ಎದುರಿಸಿತು. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಮುಖ್ಯಮಂತ್ರಿ ಅಭಿನಂದಿಸಿದರು.
ನಿರ್ಮಾಣ ಪರಿಣತಿಯ ದೃಷ್ಟಿಯಿಂದ ಪಿಡಬ್ಲ್ಯುಡಿ ದೇಶದ ಪ್ರಮುಖ ಸಂಸ್ಥೆ ಎಂದು ಅವರು ಹೇಳಿದರು. ಅಭಿವೃದ್ಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೆಲವರು ಅಸಮಾಧಾನ ಹೊಂದಬಹುದು. ಹಣದ ಕೊರತೆಯಿಂದಾಗಿ ಕೆಲಸ ನಿಲ್ಲಿಸಿದಾಗ ಮತ್ತು ಸೇತುವೆ ಕುಸಿದಾಗ ಅವು ಕಾಣಿಸಲಿಲ್ಲ. ಟೀಕೆಗಳ ಮೂಲಕ ಖ್ಯಾತಿ ಗಳಿಸಿದ್ದು ಕೇವಲ ಒಂದು ಸಣ್ಣ ಗುಂಪು ಮಾತ್ರ ಎಂದು ಮುಖ್ಯಮಂತ್ರಿ ದೂಷಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಕುಂದನೂರು ಫ್ಲೈ ಓವರ್ ನ್ನೂ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದರು. ಸಚಿವ ಕೆ. ಸುಧಾಕರನ್, ಸಂಸದ ಈಡನ್, ಶಾಸಕರಾದ ಎಂ.ಸ್ವರಾಜ್, ಟಿ.ಜೆ.ವಿನೋದ್, ವಿ.ಟಿ.ಥೋಮಸ್ ಮೊದಲಾದವರಿದ್ದರು.
ಕೊಚ್ಚಿಯ ಜನರ ದಶಕಗಳ ಬೇಡಿಕೆಯ ತರುವಾಯ ಈ ಎರಡು ಸೇತುವೆಗಳು ಸಾಕಾರಗೊಂಡಿದೆ. ಇದರೊಂದಿಗೆ ಕೊಚ್ಚಿಯ ಜನ ನಿಬಿಡ ಜಂಕ್ಷನ್ ನ ದಟ್ಟಣೆ ನಿಯಂತ್ರಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.