ಕಾಸರಗೋಡು: ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸಿ ರೋಟರಿ ಇಂಟರ್‍ನ್ಯಾಶನಲ್ ನೀಡುತ್ತಿರುವ ಪೊಕೇಶನಲ್ ಎಕ್ಸಲೆನ್ಸ್ ಅವಾರ್ಡ್‍ಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಾಮೂಹಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಬಿ.ಅಶ್ರಫ್, ಫ್ರೀಲ್ಯಾನ್ಸ್ ಫೋಟೋಗ್ರಾಫರ್ ವಿನಯ್ ಕುಮಾರ್, ಅಡ್ಕತ್ತಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಎ ಯಶೋಧ, ಜನಮೈತ್ರಿ ಬೀಟ್ ಅಧಿಕಾರಿಗಳಾದ ಮಧು, ಪ್ರವೀಣ ಹಾಗೂ ಪೇಪರ್ ಬ್ಯಾಗ್ ತಯಾರಿಕಾ ಸಂಸ್ಥೆಯ ಎಂ. ಬಿಂದ್ಯಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 26ರಂದು ರೋಟರಿ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.