ಕಾಸರಗೋಡು: ಜಿಲ್ಲೆಯ ಸರ್ಕಾರಿ ಸಂಸ್ಥೆಯೊಂದರಲ್ಲಿ ಓಪನ್ ನಾನ್ ಪ್ರಯಾರಿಟಿ ವಿಭಾಗದಲ್ಲಿ ಜ್ಯೂನಿಯರ್ ಇನ್‍ಸ್ಟ್ರಕ್ಟರ್ ಹುದ್ದೆ ತೆರವಾಗಿದ್ದು, ಡಿಪೆÇ್ಲಮಾ ಇನ್ ಮಲ್ಟಿ ಮೀಡಿಯಾ ಆನಿಮೇಷನ್/ ಎನ್.ಟಿ.ಸಿ.ಯು. ಜೊತೆಗೆ 3 ವರ್ಷದ ವೃತ್ತಿ ಅನುಭವ ಅಥವಾ ಎನ್.ಎ.ಸಿ.ಯು. ಸಂಬಂಧ ಪಟ್ಟ ಟ್ರೇಡ್ ನಲ್ಲಿ ಒಂದು ವರ್ಷದ ವೃತ್ತಿ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಶಿಕ್ಷಣಾರ್ಹತೆ, ವೃತ್ತಿ ಪರಿಚಯಗಳ ದಾಖಲಾತಿ ಸಹಿತ ಆಯಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜ.20ರ ಮುಂಚಿತವಾಗಿ ನೊಂದಾವಣೆ ನಡೆಸುವಂತೆ ಪ್ರಕಟಣೆ ತಿಳಿಸಿದೆ.