ತಿರುವನಂತಪುರ: ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದಿಂದ ಸ್ವಪ್ನಾ ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಟ್ಟಕ್ಕುಳಂಗರ ಮಹಿಳಾ ಜೈಲಿನಲ್ಲಿದ್ದ ಸ್ವಪ್ನಾಳಿಗೆ ತೀವ್ರ ದೈಹಿಕ ಅಸ್ವಸ್ಥತೆ ಕಂಡುಬಂದದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಕ್ತದೊತ್ತಡದ ಏರಿಳಿತದಿಂದಾಗಿ ಇಂತಹ ಆಯಾಸ ಹೆಚ್ಚಾಗಿ ಕಂಡುಬರುತ್ತದೆ ಎಂದು ಸ್ವಪ್ನಾ ಹೇಳಿರುವರು.