ಮಂಜೇಶ್ವರ: ಕೆ.ಎಸ್.ಬಿ.ಎ ಕಾಸರಗೋಡು ತಾಲೂಕು ವನಿತಾ ಕನ್ವೆನ್ಶನ್ ನಿನ್ನೆ ಮಂಜೇಶ್ವರದಲ್ಲಿ ನಡೆಯಿತು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸುನೀತಾ ಕುಲಾಲ್ ವಹಿಸಿದ್ದರು.
ವನಿತಾ ಜಿಲ್ಲಾ ಅಧ್ಯಕ್ಷೆ ಕ್ಷಮಾ.ಪಿ ನಾಯರ್, ವನಿತಾ ವಿಭಾಗದ ನೇತಾರರಾದ ಅನಿತಾ, ಶಾಲಿನಿ, ರೀನಾ, ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಎನ್. ಸೇದು, ಆರ್. ನಟರಾಜನ್, ಜಿಲ್ಲಾ ಸಮಿತಿ ಸದಸ್ಯರಾದ ಎಮ್.ಗೋಪಿ, ಕೆ.ಗೋಪಿ, ಎನ್.ಆರ್ ಕೃಷ್ಣ ಭಂಡಾರಿ, ಸತ್ಯನಾರಾಯಣ ಬದಿಯಡ್ಕ ಉಪಸ್ಥಿತರಿದ್ದರು.
ಸಂಘಟನೆಯ ನೂತನ ಪದಾಧಿಕಾರಿಗಳಾಗಿ ಸುನೀತಾ ಕುಲಾಲ್(ಅಧ್ಯಕ್ಷೆ),ಶಕೀಲಾ ಬಂಗೇರಾ(ಕಾರ್ಯದರ್ಶಿ), ಸುಪ್ರಭಾ ಶೆಟ್ಟಿ(ಖಜಾಂಚಿ) ಅಧಿಕಾರ ಸ್ವೀಕರಿಸಿದರು. ಶಕೀಲಾ ಬಂಗೇರ ಸ್ವಾಗತಿಸಿ, ಯೋಗಿತಾ ಮಾಡ ವಂದಿಸಿದರು. ಕೆ.ಎಸ್.ಬಿ.ಎ ಜಿಲ್ಲಾ ಕಾರ್ಯದರ್ಶಿ ರಮೇಶ್ ನೀಲೇಶ್ವರ ಸಂಘಟನಾ ವರದಿ ಮಂಡಿಸಿ, ನಿರೂಪಿಸಿದರು.