ತಿರುವನಂತಪುರ: ಜನವಾಸ ಪ್ರದೇಶಗಳಲ್ಲಿ ಕಾಣಿಸಿಕೊಂಡು ಜೀವಹಾನಿಗೊಳಗಾಗುವ ವಿವಿಧ ಬಗೆಯ ಸರೀಸೃಪ(ಹಾವು)ಗಳನ್ನು ಸುರಕ್ಷಿತವಾಗಿ ಅರಣ್ಯಾಂತರದೊಳಗಿನ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ದಾಟಿಸುವಲ್ಲಿ ನೆರವಾಗಲು ಮತ್ತು ಸಾರ್ವಜನಿಕರಿಗೆ ಭದ್ರತೆ ಒದಗಿಸಲು ಅರಣ್ಯ ರಾಜ್ಯ ಇಲಾಖೆ ನೂತನವಾಗಿ ಆವಿಷ್ಕರಿಸಿದ "ಸರ್ಪಾ ಆಫ್"(ಸ್ನೇಕ್ ಅವೇರ್ನೆಸ್ ರೆಸ್ಕ್ಯೂಂ ಆಂಡ್ ಪ್ರೊಟೆಕ್ಷನ್ ಅಪ್ಲಿಕೇಶನ್) ನ್ನು ಪ್ರಾರಂಭಿಸಲಾಗಿದೆ.
ಈ ಅಪ್ಲಿಕೇಶನ್ ನಲ್ಲಿ ಹಾವುಗಳನ್ನು ಕಂಡ ತಕ್ಷಣ ರೆಕಾರ್ಡ್ ಮಾಡಿದರೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಹಾವು ಹಿಡಿಯುವ ಸ್ವಯಂಸೇವಕರಿಗೆ ಅಧಿಕೃತವಾಗಿ ಸಂದೇಶ ತಲಪುತ್ತದೆ. ಶೀಘ್ರದಲ್ಲೇ ಹಾವು ಹಿಡಿಯುವವರು ಗೂಗಲ್ ನಕ್ಷೆಯ ಸಹಾಯದಿಂದ ಸ್ಥಳವನ್ನು ತಲುಪಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯದೊಳಗೆ ಬಿಡುವ ವ್ಯವಸ್ಥೆ ಈ ಮೂಲಕ ಕಲ್ಪಿಸಲಾಗಿದೆ.
ಸ್ವಯಂಸೇವಕರ ರಕ್ಷಣಾ ಪ್ರಯತ್ನಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿಖರವಾಗಿ ಮೇಲ್ವಿಚಾರಣೆ ಮಾಡಲು ಆಪ್ ವಿಶಿಷ್ಟ ವ್ಯವಸ್ಥೆ ಹೊಂದಿದೆ. ತುರ್ತು ಸಂಪರ್ಕ ಸಂಖ್ಯೆಗಳು, ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು, ತರಬೇತಿ ಪಡೆದ ಹಾವು ಹಿಡಿಯುವವರು, ಆಯಾ ಪ್ರದೇಶಗಳ ಉಸ್ತುವಾರಿ ಅಧಿಕಾರಿಗಳ ಸಂಖ್ಯೆ, ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಮತ್ತು ಕೇರಳದಲ್ಲಿ ಹಾವುಗಳ ಬಗ್ಗೆ ಮಾಹಿತಿ ಈ ಅಪ್ಲಿಕೇಶನ್ ಒದಗಿಸುತ್ತದೆ. ತರಬೇತಿ ಪಡೆದ ವೃತ್ತಿಪರರಿಂದ ಮಾಹಿತಿ ಪಡೆಯುವ ಸೌಲಭ್ಯವನ್ನು ಆಫ್ ಹೊಂದಿದೆ.
ಹಾವುಗಳನ್ನು ಕೊಲ್ಲುವುದನ್ನು ತಡೆಗಟ್ಟಲು ಮತ್ತು ಆ ಮೂಲಕ ಪ್ರಕೃತಿಯ ಸಮತೋಲನವನ್ನು ಕಾಪಾಡಲು ಅರಣ್ಯ ಇಲಾಖೆ ಹೊಸ ಉಪಕ್ರಮವನ್ನು ಮೂಲಕ ಪ್ರಾರಂಭಿಸಿದೆ. ಇತ್ತೀಚೆಗೆ, ಅರಣ್ಯ ಇಲಾಖೆ ಅರಣ್ಯ ರೇಂಜರ್‍ಗಳಿಗೆ ಮತ್ತು ಸಾರ್ವಜನಿಕರಿಗೆ ಹಾವು ಹಿಡಿಯುವ ತರಬೇತಿಯನ್ನು ನೀಡಿತ್ತು.
ಸಾರ್ವಜನಿಕರು ಹಾವುಗಳನ್ನು ಪತ್ತೆಹಚ್ಚಿದರೆ ಅದರ ಪೋಟೋ ಮತ್ತು ಅದರ ಸ್ಥಳದ ಮಾಹಿತಿಯನ್ನು ಅಪ್ಲಿಕೇಶನ್‍ಗೆ ವರ್ಗಾಯಿಸಬಹುದು. ಹಾವನ್ನು ಹಿಡಿಯಲು ಸಾರ್ವಜನಿಕರು ಏನನ್ನೂ ಪಾವತಿಸಬೇಕಾಗಿಲ್ಲ. ಈ ಅಪ್ಲಿಕೇಶನ್ ಶೀಘ್ರದಲ್ಲೇ ಕೇರಳದಾದ್ಯಂತ ಬಿಡುಗಡೆಯಾಗಲಿದೆ. ಪ್ಲೇ ಸ್ಟೋರ್‍ನಿಂದ 'ಸ್ನೇಕ್' ಆಪ್ ಡೌನ್ ಲೋಡ್ ಮಾಡುವ ಮೂಲಕ ಸಾರ್ವಜನಿಕರೆಲ್ಲರೂ ಹಾವುಗಳ ಸುರಕ್ಷಿತ ಸಂರಕ್ಷಣೆಯಲ್ಲಿ ಕೈಜೋಡಿಸಬಹುದು.