ಮಂಗಳೂರು : ಟೀಮ್ ಮಂಜುಶ್ರೀ ಕುಡ್ಲ ಪ್ರಾಯೋಜಕತ್ವದಲ್ಲಿ ಮೂಡಿಬಂದ ಮಂಜುಶ್ರೀ ಸ್ವರ ಸಂಭ್ರಮ ಕಾರ್ಯಕ್ರಮದ ವಿಜೇತರನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವು ಮಂಗಳೂರು ಪಡೀಲು ಸಮೀಪದ ಕಣ್ಣೂರಿನ ಯುವಕ ಮಂಡಲ ಕಛೇರಿಯಲ್ಲಿ ಜರಗಿತು. ಮಂಜುಶ್ರೀ ಸ್ವರ ಸಂಭ್ರಮ ಕಾರ್ಯಕ್ರಮದ ಪ್ರಥಮ ಬಹುಮಾನವನ್ನು ಪವಿತ್ರಾ ಆಚಾರ್ಯ ಪಾಣೆಮಂಗಳೂರು ಮತ್ತು ದ್ವಿತೀಯ ಬಹುಮಾನವನ್ನು ಗಾಯತ್ರಿ ಬಂಜನ್ ಬಿ ಸಿ ರೋಡ್ ಪಡೆದರು. ಅತೀ ಹೆಚ್ಚು ಲೈಕ್ ಪಡೆದ ಹತ್ತು ಸ್ಪರ್ಧಿಗಳಾಗಿ ನಿವೇದಿತಾ ಜಿ ಕೋಟ್ಯಾನ್ ಸುರತ್ಕಲ್, ಚಂದ್ರಶೇಖರ ಕನ್ನಡಿಕಟ್ಟೆ, ನಾಗೇಶ್ ಪೂಜಾರಿ ಸಕಲೇಶಪುರ, ರಕ್ಷಿತಾ ಕುಂದಾಪುರ, ಶಿಲ್ಪಾ ಮಾನ್ಯ ಕಾಸರಗೋಡು, ಸೌರಭ ಗೋಳಿಯಂಗಡಿ, ಪವಿತ್ರಾ ಕೋಟ್ಯಾನ್ ಪಡೀಲ್, ಅಶ್ವಿನಿ ನರಹರಿ ನಾಯಕ್ ಕುಮಟ, ಮಧುಲತಾ ಕುಲಾಲ್ ಬೆಳ್ಳಾರೆ, ಗೌತಮಿ ಪುತ್ತೂರು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿ ಭಾಗವತ, ಪ್ರಸಂಗಕರ್ತ ವಿಜಿತ್ ಶೆಟ್ಟಿ ಆಕಾಶಭವನ ಮತ್ತು ಅಧ್ಯಾಪಕಿ, ನೃತ್ಯ ಶಿಕ್ಷಕಿ, ಹವ್ಯಾಸಿ ಗಾಯಕಿ ಭಾರತಿ ಕುಲಾಲ್ ಸಹಕರಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ, ಸಾಹಿತಿ ಶೇಖರ ಶೆಟ್ಟಿ ಹೊಯ್ಗೆಬೈಲ್, ಖ್ಯಾತ ಯಕ್ಷಗಾನ ಕಲಾವಿದ ಸುರೇಶ್ ಶೆಟ್ಟಿ ಯೆಯ್ಯಾಡಿ, ಟೀಮ್ ಮಂಜುಶ್ರೀ ತುಳುವೆರ್ ತುಳುನಾಡ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರೂ, ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಟೀಮ್ ಮಂಜುಶ್ರೀ ಕುಡ್ಲ ತಂಡದ ಗೌರವಾಧ್ಯಕ್ಷ ಪುಷ್ಪರಾಜ್ ರಾವ್ ಉಪಸ್ಥಿತರಿದ್ದರು. ಸಂಸ್ಥಾಪಕ ವಂಶಿ ಪಂಡಿತ್ ಮಂಗಳೂರು ಸ್ವಾಗತಿಸಿ, ಧನರಾಜ್ ಟಿ ವಂದಿಸಿದರು. ಸಂಸ್ಥಾಪಕ ಮನೋಜ್ ಕುಲಾಲ್ ಕೊಡಕ್ಕಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ತಾಂತ್ರಿಕ ವಿಭಾಗದ ನೇತೃತ್ವವನ್ನು ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಚಂದ್ರೇಶ್ ಮಾನ್ಯ ಕಾಸರಗೋಡು ವಹಿಸಿದ್ದರು. ರಜನೀಶ್ ಅಶ್ವ, ರಮೇಶ್ ಕುಲಾಲ್ ನಾರಾಯಣಮಂಗಲ ಸಹಕರಿಸಿದರು.