ಕಾಸರಗೋಡು: ಜಿಲ್ಲಾ ಯೂತ್ ಪಾರ್ಲಿಮೆಂಟ್ ವಿಜೇತರನ್ನು ಘೋಷಿಸಲಾಗಿದೆ. ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಕೇಂದ್ರ ಯುವಜನ ಕಲ್ಯಾಣ-ಕ್ರೀಡಾ ಮಂತ್ರಾಲಯ ನೇತೃತ್ವದಲ್ಲಿ ನೆಹರೂ ಯುವ ಕೇಂದ್ರ, ನ್ಯಾಷನಲ್ ಸರ್ವೀಸ್ ಸ್ಕೀಂ, ಯುನೈಟೆಡ್ ನ್ಯಾಷನಲ್ ಡೆವೆಲಪ್ ಮೆಂಟ್ ಪೆÇ್ರೀಗ್ರಾಂ ಸಹಕಾರದೊಂದಿಗೆ ನಡೆಸಲಾಗಿತ್ತು.
ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ಷಮೀಂ ಅಹಮ್ಮದ್ ಚೆಮ್ನಾಡ್, ಕೆ.ಷರ್ವಾಣಿ ನೀರ್ಚಾಲು ವಿಜೇತರಾಗಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗೆ ಇವರು ಅರ್ಹರಾಗಿದ್ದಾರೆ ಎಂದು ನೆಹರೂ ಯುವ ಕೇಂದ್ರ ಜಿಲ್ಲಾ ಯೂತ್ ಅಧಿಕಾರಿ ಕೆ.ರಮ್ಯೂ ತಿಳಿಸಿದರು.